42ರ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ಅದ್ಭುತ ಕ್ಯಾಚ್!: ವಿಡಿಯೋ ವೈರಲ್ - Mahanayaka

42ರ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ಅದ್ಭುತ ಕ್ಯಾಚ್!: ವಿಡಿಯೋ ವೈರಲ್

doni
27/03/2024


Provided by

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ನೇ ಸಾಲಿನ ಟ್ವಿಂಟಿ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಬಾರಿಗೆ ಗೆಲುವು ದಾಖಲಿಸಿದೆ.

ಮಂಗಳವಾರ ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 63 ರನ್ ಗಳ ಅಂತರದಲ್ಲಿ ಸಿಎಸ್ ಕೆ ಭರ್ಜರಿ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅದ್ಭುತ ಕ್ಯಾಚ್ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ. 42ರ ಹರೆಯದಲ್ಲೂ ಯುವಕರನ್ನೂ ಮೀರಿಸುವ ಧೋನಿ ಅವರ ಫಿಟ್ನೆಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಐಪಿಎಲ್ ನಲ್ಲಿ ಮಾತ್ರ ತೊಡಗಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಇನ್ನೂ ಕೂಡ ವಿಕೆಟ್ ಕೀಪಿಂಗ್ ನಲ್ಲಿ ಕೌಶಲ್ಯ ಕಾಪಾಡಿಕೊಂಡಿದ್ದಾರೆ. ವಯಸ್ಸು ಅನ್ನೋದು ಧೋನಿಗೆ ಕೇವಲ ಸಂಖ್ಯೆ ಅಷ್ಟೆ ಎಂದು ಕ್ರಿಕೆಟ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

 

ಇತ್ತೀಚಿನ ಸುದ್ದಿ