ಡಿ.ಕೆ.ಶಿವಕುಮಾರ್ ಕೂಡ ಲಿಮಿಟ್ ಮೀರಿ ಹೋಗಬಾರದು: ಸತೀಶ್ ಜಾರಕಿಹೊಳಿ - Mahanayaka

ಡಿ.ಕೆ.ಶಿವಕುಮಾರ್ ಕೂಡ ಲಿಮಿಟ್ ಮೀರಿ ಹೋಗಬಾರದು: ಸತೀಶ್ ಜಾರಕಿಹೊಳಿ

sathis jarakiholli
03/02/2023

ಬೆಂಗಳೂರು: ರಮೇಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಿಡಿ ಕದನಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾರು ಕೂಡ ವೈಯಕ್ತಿಕ ಟೀಕೆ ಮಾಡಬಾರದು, ರಮೇಶ್ ಇರಬಹುದು, ಡಿ.ಕೆ.ಶಿವಕುಮಾರ್ ಇರಬಹುದು. ಯಾರೇ ಆಗಲಿ ಒಂದು ಲಿಮಿಟ್ ನಲ್ಲಿ ಹೇಳಿಕೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಆರೋಪ ಮಾಡುವುದು ದೊಡ್ಡದಲ್ಲ, ಅದರಿಂದ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೂ ಹಾನಿಯಾಗುತ್ತದೆ. ರಮೇಶ್ ದೆಹಲಿ ಭೇಟಿ ವೇಳೆ ಪತ್ರಿಕೆ ನೋಡಿದೆ. ನಾನು ಮಾಧ್ಯಮಗಳ ಮೂಲಕ ರಮೇಶ್ ಗೆ ಕಿವಿಮಾತು ಹೇಳುತ್ತೇನೆ, ಯಾವುದೂ ಲಿಮಿಟ್ ಮೀರಿ ಹೋಗುವುದು ಬೇಡ ಎಂದು ಅವರು ಹೇಳಿದರು.

ಹೋರಾಟ ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲೇ ಇರಬೇಕು. ಕಾನೂನು ಹೋರಾಟದ ಅವಕಾಶ ಎಲ್ಲರಿಗೂ ಇರುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ