ಇವಿಎಂ ನಿಷೇಧಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ | ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ - Mahanayaka
9:38 PM Thursday 16 - January 2025

ಇವಿಎಂ ನಿಷೇಧಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ | ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

26/11/2020

ನವದೆಹಲಿ: ಬಿಹಾರ ಚುನಾವಣೆ ಹಾಗೂ ಉಪಚುನಾವಣೆಗಳ ನಂತರ ಇದೀಗ  ಎಲೆಕ್ಟ್ರಾನಿಕ್ ಮತ (ಇವಿಎಂ) ವಿರುದ್ಧ ಮತ್ತೆ ಆಕ್ರೋಶ ಕೇಳಿ ಬಂದಿದ್ದು, ಈ ವಿಚಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

 ವಕೀಲ ಸಿ.ಆರ್. ಜಯ ಸುಕಿನ್ ಎಂಬವರು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು,  ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್​ ಪೇಪರ್​ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.


ADS

ಇವಿಎಂಗಳು ದೋಷಪೂರಿತವಾಗಿದ್ದು, ಅವುಗಳನ್ನು ತಿರುಚುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಹಲವು ರಾಷ್ಟ್ರಗಳು ಇವಿಎಂ ಬಳಕೆ ನಿಷೇಧಿಸಿದೆ.  ಭಾರತದಲ್ಲಿ ಕೂಡ ಇವಿಎಂ ಬಳಕೆ ಕೈಬಿಡಲು ನಿರ್ದೇಶಿಸಬೇಕು. ಇವಿಎಂಗಳನ್ನು ಅವುಗಳ ತಯಾರಿಕೆಯ ಹಂತದಲ್ಲೆ ತಂತ್ರಾಂಶ ಹ್ಯಾಕ್ ಅವಕಾಶವಿದೆ. ಹಾಗಾಗಿ ಯಾವುದೇ ಹ್ಯಾಕರ್ ಅಥವಾ ಮಾಲ್​ವೇರ್ ನೆರವು ಅಗತ್ಯವೂ ಇಲ್ಲದೆ ಫಲಿತಾಂಶ ತಿರುಚಬಹುದು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

 ಭಾರತದಲ್ಲಿ ಸಾಂಪ್ರದಾಯಿಕ ಮತಪತ್ರ ಬಳಕೆ ಜಾರಿಗೆ ಬಂದರೆ ಮತಗಳನ್ನು ತಿರುಚುವ ಮತ್ತು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ  ಮತಪತ್ರಗಳೇ ವಿಶ್ವಾಸಾರ್ಹ ವಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.


ಇತ್ತೀಚಿನ ಸುದ್ದಿ