ಬಳ್ಳಾರಿ ಜೈಲು ದರ್ಶನ್ ಗೆ ಸೇಫ್ ಅಲ್ಲ ಎಂದ ಮಾಜಿ ಕೈದಿ!

ಹಾವೇರಿ: ದರ್ಶನ್ ಗೆ ಬಳ್ಳಾರಿ ಜೈಲು ಸೇಫ್ ಅಲ್ಲ ಅಂತ ಮಾಜಿ ಕೈದಿ ಶಿಗ್ಲಿ ಬಸ್ಯಾ ಹೇಳಿದ್ದು, ನಟ ದರ್ಶನ್ ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಿದರೆ ಅವರ ಮನಃಪರಿವರ್ತನೆ ಮಾಡಬಹುದು ಅಂದಿದ್ದಾರೆ,
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಶಿಗ್ಲಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಬಳ್ಳಾರಿ ಜೈಲಿನಲ್ಲಿ 1989ರಿಂದ 2009ವರೆಗಿದ್ದೆ. ಜೈಲಲ್ಲಿ ದುಡ್ಡುಕೊಟ್ಟರೆ ಏನು ಬೇಕಾದ್ರೂ ಸಿಗುತ್ತದೆ ಎಂದಿದ್ದಾರೆ.
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರೆ ಉಪಯೋಗವಿಲ್ಲ, ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು. ಬಳ್ಳಾರಿ ಜೈಲಿನಲ್ಲಿ ಕೈದಿಗಳ ಜೊತೆ ಸೇರಿದ್ರೆ ದರ್ಶನ್ ಕೂಡ ಕೆಡುತ್ತಾರೆ ಎಂದು ಹೇಳಿದರು.
ಬಳ್ಳಾರಿ ಜೈಲಿನಲ್ಲಿ ಕೂಡ ಗಾಂಜಾ, ಸಿಗರೇಟ್, ಮೊಬೈಲ್ ಎಲ್ಲವೂ ಸಿಗುತ್ತದೆ. ಎಲ್ಲ ವ್ಯವಹಾರಗಳೂ ಅಲ್ಲಿ ನಡೆಯುತ್ತದೆ ಎಂದು ಆರೋಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth