ಪೊಲೀಸ್‌ ಠಾಣೆಯಲ್ಲಿ ಪೊಲೀಸರ ಎದುರೇ ಪತ್ನಿಯ ಕತ್ತುಕೊಯ್ದ ಪತಿ! - Mahanayaka

ಪೊಲೀಸ್‌ ಠಾಣೆಯಲ್ಲಿ ಪೊಲೀಸರ ಎದುರೇ ಪತ್ನಿಯ ಕತ್ತುಕೊಯ್ದ ಪತಿ!

hasana
20/11/2023

ಹಾಸನ: ಪೊಲೀಸ್‌ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ಪೊಲೀಸರ ಎದುರೇ ಪತಿ ಪತ್ನಿಯ ಕತ್ತು ಕೊಯ್ದ ಆಘಾತಕಾರಿ ಘಟನೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ರವಿವಾರ ನಡೆದಿದೆ.

ಪತ್ನಿಯ ಶಿಲ್ಪಾ ಅವರ ನಡತೆ ಶಂಕಿಸಿ ಪತಿ ಹರೀಶ್‌ ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಹರೀಶ್‌ ನನ್ನು ಠಾಣೆಗೆ ಕರೆಸಿ ಶಿಲ್ಪಾ ಎದುರೇ ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತಿದ್ದ ವೇಳೆ  ಪತ್ನಿಯ ಆರೋಪಗಳನ್ನು ಕೇಳಿ ಕೋಪಗೊಂಡು ಚಾಕುವಿನಿಂದ ಕುತ್ತಿಗೆಯ ಬಲಭಾಗಕ್ಕೆ ಕೊಯ್ದಿದ್ದಾನೆ. ಮತ್ತೊಂದು ಬಾರಿ ಚುಚ್ಚಲು ಮುಂದಾದಾಗ ಆತನನ್ನು ತಡೆದ ಪೊಲೀಸರು ಶಿಲ್ಪಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

6 ವರ್ಷಗಳ ಹಿಂದೆ ಶಿಲ್ಪಾ ಮತ್ತು ಹರೀಶ್‌  ವಿವಾಹವಾಗಿದ್ದರು. ಪರಸ್ಪರ ಅನುಮಾನಗಳಿಂದ ಜಗಳ ಮಾಡಿಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಸದ್ಯ ಶಿಲ್ಪಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿ