ಅಪಘಾತದ ಗಾಯಗಳಿಂದ ಮಗ ಚೇತರಿಸಿಕೊಳ್ಳುತ್ತಿದ್ದಾಗಲೇ ತಂದೆ ವಿದ್ಯುತ್ ಆಘಾತಕ್ಕೆ ಬಲಿ!

ಚಿಕ್ಕಮಗಳೂರು: ತಾಲ್ಲೂಕಿನ ಅಲ್ದೂರು ಸಮೀಪದ ಕೂದುವಳ್ಳಿ ಗ್ರಾಮದ ಕೃಷಿಕ ಕೆ.ಎಲ್. ಹೂವೇಗೌಡ ಇಂದು ಶನಿವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಅಸುನಿಗಿದ್ದಾರೆ.
ಕಾಫಿ ತೋಟದ ಮರಗಸಿ ಮಾಡಿಸಲು ಅಲ್ಯೂಮಿನಿಯಂ ಏಣಿಯನ್ನು ತೋಟದೊಳಗೆ ಹೊತ್ತು ಸಾಗುತ್ತಿದ್ದಾಗ, ತೋಟದ ಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಅಚಾನಕ್ಕಾಗಿ ಏಣಿ ತಗುಲಿ ಸ್ಥಳದಲ್ಲಿ ಸಾವನಪ್ಪಿದ್ದಾರೆ.
ಇತ್ತೀಚಿಗಷ್ಟೇ ಹೂವೆಗೌಡರ ಮಗ ಟ್ಯಾಕ್ಟರ್ ಅಪಘಾತದಿಂದ ಗಂಭೀರ ಗಾಯಗಳಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ತನ್ನ ಮಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ ತಂದೆ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಅಸುನೀಗಿದ್ದಾರೆ.
ಮೃತರು ಮಡದಿ, ಮಗ ಸೇರಿದಂತೆ ಅಪಾರ ಬಂಧು ಬಳಗ ಕುಟುಂಬವನ್ನು ಅಗಲಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: