ಫೈರ್ ಕಟ್ ಮಾಡುವ ವೇಳೆ ತಲೆಗೆ ಹತ್ತಿಕೊಂಡ ಬೆಂಕಿ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ - Mahanayaka

ಫೈರ್ ಕಟ್ ಮಾಡುವ ವೇಳೆ ತಲೆಗೆ ಹತ್ತಿಕೊಂಡ ಬೆಂಕಿ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

fire cutting
23/06/2024


Provided by

ನವದೆಹಲಿ: ದಿನಕ್ಕೊಂದು ರೀತಿಯ ಹೇರ್ ಸ್ಟೈಲ್ ಗಳು ಇದೀಗ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಚಿತ್ರ ವಿಚಿತ್ರ ಹೇರ್ ಕಟ್ ಗಳು ಗಮನ ಸೆಳೆಯುತ್ತವೆ. ಅಂತಹದ್ದರಲ್ಲಿ ಇದೀಗ ಯುವಕನೋರ್ವ ಹೊಸ ಶೈಲಿಯ ಫೈರ್ ಕಟ್ ಮಾಡಲು ಹೋದ ವೇಳೆ ಸೆಲೂನ್ ನಲ್ಲಿ ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿರುವ ಘಟನೆ ನಡೆದಿದೆ.

ಯುವಕ ಕೂದಲು ಕತ್ತರಿಸಲು ಸೆಲೂನ್ ಗೆ ಹೋಗುತ್ತಾನೆ. ಅಲ್ಲಿ ಕ್ಷೌರಿಕ ಕೂದಲಿಗೆ ಜೆಲ್ ಹಾಕುತ್ತಾನೆ ನಂತರ ಕಡ್ಡಿಗೀರಿ ಆತನ ಕೂದಲಿಗೆ ಬೆಂಕಿ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಯುವಕನ ತಲೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಕ್ಷಣಮಾತ್ರದಲ್ಲಿ ಯುವಕನ  ಕುತ್ತಿಗೆಯವರೆಗೂ ಬೆಂಕಿ ವ್ಯಾಪಿಸುತ್ತದೆ.

ಬೆಂಕಿಯ ಜ್ವಾಲೆ ಕಂಡು ಯುವಕ ಬೆಚ್ಚಿ ಬಿದ್ದಿದ್ದು,  ಕುರ್ಚಿಯಿಂದ ಎದ್ದು ಓಡಲು ಮುಂದಾಗುತ್ತಾನೆ. ಈ ವೇಳೆ ಕ್ಷೌರಿಕ ತನ್ನ ಕೈಯಲ್ಲಿದ್ದ ಟವಲ್ ಮೂಲಕ ಬೆಂಕಿ ನಂದಿಸುತ್ತಾನೆ. ಆತನಿಗೆ ಆತನ ಸಹೋದ್ಯೋಗಿ ಸಹಾಯ ಮಾಡುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೂದಲನ್ನು ವಿಭಿನ್ನ ಶೈಲಿಯಲ್ಲಿ ಕತ್ತರಿಸುವುದು ಸಹಜವಾಗಿದೆ. ಎಲ್ಲರೂ ತಾವು ವಿಭಿನ್ನವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಆದ್ರೆ, ಅಪಾಯ ತಂದೊಡ್ಡುವ  ರೀತಿಯಲ್ಲಿ ಕೂದಲು ಕತ್ತರಿಸಬೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋ 10 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ವೀಕ್ಷಿಸಿ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ