ಸಮಸ್ಯೆ ಪರಿಹರಿಸಲು ಬಂದ ತಂದೆಯ ಕಾರಿಗೆ ತನ್ನ ಕಾರನ್ನೇ ಡಿಕ್ಕಿ ಹೊಡೆಸಿದ ಮಗ: ಐದು ಮಂದಿ ಗಂಭೀರ - Mahanayaka

ಸಮಸ್ಯೆ ಪರಿಹರಿಸಲು ಬಂದ ತಂದೆಯ ಕಾರಿಗೆ ತನ್ನ ಕಾರನ್ನೇ ಡಿಕ್ಕಿ ಹೊಡೆಸಿದ ಮಗ: ಐದು ಮಂದಿ ಗಂಭೀರ

21/08/2024


Provided by

ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಕುಟುಂಬದೊಂದಿಗೆ ತಂದೆ ಬಂದ ಕಾರಿಗೆ ಮಗ ತನ್ನ ಕಾರನ್ನೇ ಡಿಕ್ಕಿ ಹೊಡೆಸಿ ಐದು ಮಂದಿಗೆ ಗಂಭೀರ ಗಾಯಗೊಳಿಸಿದ ಘಟನೆ ಮುಂಬೈಯ ಥಾಣೆಯಲ್ಲಿ ನಡೆದಿದೆ. ತಂದೆ ಮತ್ತು ಕುಟುಂಬ ಪ್ರಯಾಣಿಸುತ್ತಿದ್ದ ಟಯೋಟೊ ಫಾರ್ಚುನ್ ಕಾರಿಗೆ ಥಾರ್ ಸಫಾರಿ ಕಾರಿನ ಮೂಲಕ ಮಗ ಡಿಕ್ಕಿ ಹೊಡೆಸಿರುವ ವಿಡಿಯೋ ವೈರಲ್ ಆಗಿದೆ.

ಬಿಂದೇಶ್ವರ ಶರ್ಮಾ ಎಂಬ ಮಗನೇ ತಂದೆಯ ಕಾರಿಗೆ ಡಿಕ್ಕಿ ಹೊಡೆದವನಾಗಿದ್ದು ಈತ ಮತ್ತು ಈತನ ಪತ್ನಿಯ ನಡುವೆ ಕೌಟುಂಬಿಕ ವಿವಾದ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ತಂದೆ ತನ್ನ ಕುಟುಂಬವನ್ನು ಸೇರಿಸಿ ಡ್ರೈವರ್ ನ ಮೂಲಕ ಕಾರಲ್ಲಿ ಹೊರಟಿದ್ದರು. ಆದರೆ ಮಗನ ಮನೆಗೆ ತಲುಪಿದಾಗ ಮಗ ಇರಲಿಲ್ಲ. ಸೊಸೆಯನ್ನು ಸಮಾಧಾನಿಸಿ ಈ ತಂದೆ ಮತ್ತು ಕುಟುಂಬ ಕಾರಲ್ಲಿ ಹೊರಟಾಗ ತಮ್ಮ ಕಾರನ್ನು ಮಗ ಹಿಂಬಾಲಿಸುತ್ತಿರುವುದನ್ನು ಅವರು ಕಂಡಿದ್ದಾರೆ.

ತಮ್ಮಲ್ಲಿ ಮಾತಾಡುವುದಕ್ಕಾಗಿ ಆತ ಹಿಂದಿನಿಂದ ಬರುತ್ತಿರಬಹುದು ಎಂದು ಅಂದುಕೊಂಡು ಇವರು ಕಾರನ್ನು ಬದಿಗೆ ಸರಿಸಿ ನಿಲ್ಲಿಸಿದ್ದಾರೆ. ಹೀಗೆ ನಿಲ್ಲಿಸಿದ ಕಾರಿನಿಂದ ತಂದೆ ಮತ್ತು ಡ್ರೈವರ್ ಇಳಿದ ಕೂಡಲೇ ಮಗ ವೇಗವಾಗಿ ಅವರ ಮೇಲೆ ಕಾರನ್ನು ನುಗ್ಗಿಸಿದ್ದಾನೆ. ಮಾತ್ರ ಅಲ್ಲ ಒಂದಷ್ಟು ದೂರ ಹೋಗಿ ಮತ್ತೆ ರಿವರ್ಸ್ ತೆಗೆದುಮತ್ತೆ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆಗ ತಂದೆ ಪ್ರಯಾಣಿಸಿದ್ದ ಕಾರಿನ ಹಿಂಬದಿಯಲ್ಲಿದ್ದ ಎರಡು ಬೈಕುಗಳು ಮತ್ತು ಅದರಲ್ಲಿ ಇದ್ದವರಿಗೆ ತೀವ್ರ ಗಾಯಗಳಾಗಿವೆ. ಹಾಗೆಯೇ ಡ್ರೈವರ್ ಗೂ ಗಾಯಗಳಾಗಿವೆ. ಇದೀಗ ಮಗ ಬಿಂಧೇಶ್ವರ ಶರ್ಮ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ