ಕಾಂಟ್ರೊವರ್ಸಿ: ಹಿಂಸಾಚಾರದ ಮಧ್ಯೆ ವಿವಾದಕ್ಕೊಳಗಾದ ಮಣಿಪುರದ ಮಾಜಿ ಉನ್ನತ ಪೊಲೀಸ್ ಅಧಿಕಾರಿಯ ವೀಡಿಯೋ; ಕೊನೆಗೆ ಏನಾಯಿತು..?

ಮಣಿಪುರದ ಮಾಜಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ತೌನೋಜಮ್ ಬೃಂದಾ ಅವರು ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ ಮೂಲಕ ತನ್ನ ಕುರಿತು ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಅರಂಬೈ ತೆಂಗೋಲ್ (ಮೈತೆಯಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ) ಮತ್ತು ಮೈತೆಯಿ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸಲು ಬದ್ಧವಾಗಿರುವ ಮೈತೆಯಿ ಲೀಪುನ್ ಎಂಬ ಸಂಘಟನೆಯನ್ನು ದೂರಿದ ನಂತರ ಬೃಂದಾ ಅವರ ಹೇಳಿಕೆ ಬಂದಿದೆ.
ವಾಯ್ಸ್ ನಲ್ಲಿ ಮಾಜಿ ಎಎಸ್ ಪಿ ಪ್ರಸ್ತುತ ನಡೆಯುತ್ತಿರುವ ಮಣಿಪುರ ಬಿಕ್ಕಟ್ಟಿನಲ್ಲಿ ಎರಡೂ ಸಂಘಟನೆಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡುವುದನ್ನು ಕೇಳಬಹುದು.
ಹೀಗಾಗಿ ಮೈತೆಯಿ ಲೀಪುನ್ ಸದಸ್ಯರು ಇಂಫಾಲ್ ಪಶ್ಚಿಮದಲ್ಲಿರುವ ಬೃಂದಾ ಅವರ ನಿವಾಸದಲ್ಲಿ ಜಮಾಯಿಸಿ ನೀವು ನೀಡಿದ ಹೇಳಿಕೆಗೆ ಪುರಾವೆಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ವಿವಾದ ಆಗಿದ್ದರಿಂದ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ವೈರಲ್ ಆದ ವೀಡಿಯೊದಲ್ಲಿ, ಬೃಂದಾ ಅವರು ಮಣಿಪುರ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಅರಂಬೈ ತೆಂಗೋಲ್ ಮತ್ತು ಮೈತೆಯಿ ಲೀಪುನ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದ್ದ ನಂತರ ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಾಗಿನಿಂದ 180 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದರು.