ಜೋ ಬಿಡೆನ್ ಪ್ರಮಾಣ ವಚನ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಮುಖ್ಯ ಅತಿಥಿ | ಸುದ್ದಿಯ ಹಿಂದಿನ ಸತ್ಯ ಏನು? - Mahanayaka
3:12 AM Thursday 30 - November 2023

ಜೋ ಬಿಡೆನ್ ಪ್ರಮಾಣ ವಚನ ಸಮಾರಂಭದಲ್ಲಿ ಮನಮೋಹನ್ ಸಿಂಗ್ ಮುಖ್ಯ ಅತಿಥಿ | ಸುದ್ದಿಯ ಹಿಂದಿನ ಸತ್ಯ ಏನು?

10/11/2020

ಅಮೆರಿಕ ನೂತನ ಅಧ್ಯಕ್ಷ ಜೋಬಿಡೆನ್ ಪ್ರಮಾಣ ವಚನ ಸಮಾರಂಭ 2021ರ ಜನವರಿ 20ರಂದು ನಡೆಯಲಿದ್ದು, ಈ ಸಮಾರಂಭದಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದೆ.

 

ಆದರೆ, ಈ ಸುದ್ದಿ ಸುಳ್ಳು ಸುದ್ದಿ ಎಂದು ಇಂಡಿಯಾ ಟು ಡೇ ತನ್ನ ಫ್ಯಾಕ್ಟ್ ಚೆಕ್ ನಲ್ಲಿ ತಿಳಿಸಿದೆ. ನವೆಂಬರ್ 9ರ ರಾತ್ರಿಯವರೆಗೂ ಬಿಡೆನ್ ಅವರ ಪ್ರಮಾಣ ವಚನಕ್ಕೆ ಯಾವುದೇ ಆಹ್ವಾನಗಳು ಬಂದಿಲ್ಲ ಎಂದು ಮನಮೋಹನ್ ಸಿಂಗ್ ಅವರ ಕಚೇರಿ ಸ್ಪಷ್ಟಪಡಿಸಿದೆ.

ಡಾ.ಸಿಂಗ್ ಸೇರಿದಂತೆ ಇತರ ಯಾವುದೇ ನಾಯಕರನ್ನು ಬಿಡೆನ್ ಪ್ರಮಾಣ ವಚನ ಸಮಾರಂಭಕ್ಕೆ ಕರೆದಿಲ್ಲ. ಈ ಬಗ್ಗೆ ಅಮೆರಿಕ ಸುದ್ದಿವಾಹಿನಿಗಳಲ್ಲಿಯೂ ಯಾವುದೇ ವರದಿಗಳು ಕಂಡು ಬಂದಿಲ್ಲ.

ಸಾಮಾನ್ಯವಾಗಿ ಪ್ರಮಾಣ ವಚನ ಕಾರ್ಯಕ್ರಮಗಳಲ್ಲಿ ಅತಿಥಿಗಳು ಮಾತ್ರವೇ ಇರುತ್ತಾರೆ. ಮುಖ್ಯ ಅತಿಥಿಗಳು ಇರುವುದಿಲ್ಲ. ಹೀಗಾಗಿ ಮನಮೋಹನ್ ಸಿಂಗ್ ಅವರ ಕಚೇರಿಯ ಮಾಹಿತಿಯಂತೆ, ಮನಮೋಹನ್ ಸಿಂಗ್ ಅವರಿಗೆ ಯಾವುದೇ ಆಹ್ವಾನಗಳು ಬಂದಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ.

ಇತ್ತೀಚಿನ ಸುದ್ದಿ