ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಶಂಕುಸ್ಥಾಪನೆ | 1.5 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ

ಮೈಸೂರು: ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಶಂಕು ಸ್ಥಾಪನೆ ನೆರವೇರಿಸಿದರು
ಟಿ.ನರಸೀಪುರ ತಾಲೂಕು ಯಾಚೇನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು ಮನುಜ ಮತ ವಿಶ್ವ ಪಥ ಎಂದು ಸಾರಿದ ಕುವೆಂಪುರವರ ವೈಚಾರಿಕ ಪ್ರಗ್ನೆಯನ್ವನ ನಾವಿಂದು ಮೈಗೂಡಿಸಿಕೊಳ್ಳಬೇಕಾಗಿದೆ.
ಅವರು ಪ್ರತಿಪಾದಿಸಿದ ವೈಜ್ನಾನಿಕ ವೈಚಾರಿಕ ನೆಲಗಟ್ಟಿನಲ್ಲಿ ಮುನ್ನಡೆಯಬೇಕಾಗಿದೆ. ಈ ನಾಡಿನ ವೈಚಾರಿಕ ಆತ್ಮಸಾಕ್ಷಿಗಳಾದ ಬುದ್ದ,ಬಸವ, ಅಂಬೇಡ್ಕರರ ಸಾಲಿನಲ್ಲಿ ಕುವೆಂಪು ನಿಲ್ಲುತ್ತಾರೆಂದರು.
ಮಂತ್ರ ಮಾಂಗಲ್ಯ ವಿವಾಹಗಳ ಮೂಲಕ ಶೂದ್ರ ವರ್ಗದವರು ಮಾಡುತಿದ್ದ ಖರ್ಚುಗಳಿಗೆ ತಿಲಾಂಜಲಿ ಹೇಳಿ ಆಡಂಬರದ ವಿವಾಹಗಳಿಂದಾಗುವ ಪರಿಣಾಗಳ ಬಗೆಗೆ ತಿಳಿ ಹೇಳಿದರು.
ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆಯುವುದರೊಂದಿಗೆ ಸಾಹಿತ್ಯದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾದರು ಅಂತಹವರ ಉದಾತ್ತ ಸಾಹಿತ್ಯವನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಬೇಕೆಂದರು
ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗಾನಂದ ಸ್ವಾಮೀಜಿಗಳ ಕಾರ್ಯ ಸ್ತುತ್ರಾರ್ಹ ಎಂದರು.
ಕಾರ್ಯಕ್ರಮದಲ್ಲಿ ಸಂಸದರಾದ ಸುನೀಲ್ ಬೋಸ್, ನಿವೇಶನ ದಾನಿಗಳಾದ ಶಂಕರೇಗೌಡ, ಸಂಸ್ಕೃತಿ ಚಿಂತಕ ಭಗವಾನ್, ನಾಗಾನಂದ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97