ಅಪ್ರಾಪ್ತೆ ಪಾಲಿಗೆ ರಕ್ಕಸನಾದ ಸ್ನೇಹಿತ: ಕೋಟಾ ನೀಟ್ ಆಕಾಂಕ್ಷಿಯ ಮೇಲೆ ಸಾಮೂಹಿಕ ಅತ್ಯಾಚಾರ: ಕಿರಾತಕ ಅರೆಸ್ಟ್ - Mahanayaka

ಅಪ್ರಾಪ್ತೆ ಪಾಲಿಗೆ ರಕ್ಕಸನಾದ ಸ್ನೇಹಿತ: ಕೋಟಾ ನೀಟ್ ಆಕಾಂಕ್ಷಿಯ ಮೇಲೆ ಸಾಮೂಹಿಕ ಅತ್ಯಾಚಾರ: ಕಿರಾತಕ ಅರೆಸ್ಟ್

15/02/2024


Provided by

ಜೈಪುರ: ಕೋಚಿಂಗ್ ಕೇಂದ್ರವಾದ ಕೋಟಾದಲ್ಲಿ 16 ವರ್ಷದ ನೀಟ್ ಆಕಾಂಕ್ಷಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ ವ್ಯಕ್ತಿಯೋರ್ವ ಬಾಲಕಿಯನ್ನು ಕರೆದಿದ್ದ. ಹೀಗಾಗಿ ಅವಳು ಅವನ ಫ್ಲಾಟ್ ಗೆ ಭೇಟಿ ನೀಡಿದ್ದಳು. ಅಲ್ಲಿ ಅವನ ಇತರ ಮೂವರು ಸ್ನೇಹಿತರು ಇದ್ದರು. ಇವರೆಲ್ಲರೂ ನೀಟ್ ಆಕಾಂಕ್ಷಿಗಳಾಗಿದ್ದರು.
ಕೋಟಾದ ಕುನ್ಹಾಡಿ ಪ್ರದೇಶದಲ್ಲಿ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಎಸ್ಪಿ ಉಮಾ ಶರ್ಮಾ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ನಾಲ್ವರು ಆರೋಪಿ ವಿದ್ಯಾರ್ಥಿಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಬಾಲಕಿ ಸುಮಾರು 20 ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತನನ್ನು ಭೇಟಿಯಾಗಿದ್ದಳು ಎನ್ನಲಾಗಿದೆ. ಸ್ನೇಹಿತ ಕೋಟಾದ ಲ್ಯಾಂಡ್ ಮಾರ್ಕ್ ಪ್ರದೇಶದಲ್ಲಿ ಬಾಡಿಗೆ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ ಎಂದು ವರದಿಯಾಗಿದೆ.

ಆಘಾತಕ್ಕೊಳಗಾದ ಹುಡುಗಿ ಖಿನ್ನತೆಗೆ ಒಳಗಾಗಿದ್ದಳು. ಇದನ್ನು ಅವಳ ಸ್ನೇಹಿತರು ಗಮನಿಸಿ ಅವಳಿಗೆ ಸಲಹೆ ನೀಡಿದರು. ಕೌನ್ಸೆಲಿಂಗ್ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ