ನವದೆಹಲಿಯಲ್ಲಿ ಜಿ20 ಶೃಂಗಸಭೆ ಮುಕ್ತಾಯ: ಜಿ20 ಅಧ್ಯಕ್ಷ ಸ್ಥಾನ ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರ - Mahanayaka

ನವದೆಹಲಿಯಲ್ಲಿ ಜಿ20 ಶೃಂಗಸಭೆ ಮುಕ್ತಾಯ: ಜಿ20 ಅಧ್ಯಕ್ಷ ಸ್ಥಾನ ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರ

10/09/2023


Provided by

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಶನಿವಾರದಿಂದ ಆರಂಭವಾಗಿರುವ ಜಿ20 ಶೃಂಗಸಭೆ ಇಂದು ಮುಕ್ತಾಯಗೊಂಡಿದೆ. ನವೆಂಬರ್​ನಲ್ಲಿ ವರ್ಚ್ಯುವಲ್ ಸಭೆ ನಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾಗೆ ಹಸ್ತಾಂತರಿಸಿದರು.

ಮುಂದಿನ ವರ್ಷ ಬ್ರೆಜಿಲ್​ನಲ್ಲಿ ಜಿ20 ಸಮ್ಮೇಳನವನ್ನು ಆಯೋಜಿಸಲಾಗುವುದು, ಆದರೆ ನವೆಂಬರ್​ ಅಂತ್ಯದವರೆಗೆ ಅಧ್ಯಕ್ಷ ಸ್ಥಾನ ಭಾರತದೊಂದಿಗೆ ಇರಲಿದೆ.
ನವೆಂಬರ್ ವರೆಗೂ ಜಿ20 ಅಧ್ಯಕ್ಷ ಜವಾಬ್ದಾರಿ ಭಾರತದೊಂದಿಗಿರಲಿದೆ. ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ, ಈ ಅವಧಿಯಲ್ಲಿ ಅನೇಕ ವಿಷಯಗಳನ್ನಿಟ್ಟುಕೊಂಡು ಚರ್ಚೆ ನಡೆಸಬೇಕಿದೆ. ಬಂದಿರುವ ಸಲಹೆಗಳನ್ನು ಮತ್ತೊಮ್ಮೆ ನೋಡುವುದು ಹಾಗೂ ಅವುಗಳ ಪ್ರಗತಿಯನ್ನು ಹೇಗೆ ವೇಗಗೊಳಿಸಬಹುದು ಎಂಬುದನ್ನು ಗಮನಿಸುವುದು ನಮ್ಮ ಜವಾಬ್ದಾರಿಯಾಗಿದೆ. ನವೆಂಬರ್ ಅಂತ್ಯದಲ್ಲಿ ಜಿ20 ವರ್ಚ್ಯುವಲ್ ಅಧಿವೇಶನವನ್ನು ನಡೆಸಲು ನಿರ್ಧರಿಸಲಾಗಿದೆ.

ಇಂದು ಮುಂಜಾನೆ ವಿಶ್ವ ನಾಯಕರು ರಾಜ್​ಘಾಟ್​ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ನವದೆಹಲಿಯ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗುತ್ತಿರುವ 18 ನೇ ಜಿ 20 ಶೃಂಗಸಭೆಯ ಮೊದಲ ದಿನದಂದು ಪ್ರಧಾನಿ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ 30 ಕ್ಕೂ ಹೆಚ್ಚು ದೇಶಗಳು ಮತ್ತು ಸಂಸ್ಥೆಗಳ ನಾಯಕರಿಗೆ ಆತಿಥ್ಯ ನೀಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ 20 ಸ್ಥಳದಲ್ಲಿ ಸುಮಾರು 400 ಅತಿಥಿಗಳಿಗೆ ಅದ್ಧೂರಿ ಭೋಜನವನ್ನು ಆಯೋಜಿಸುವುದರೊಂದಿಗೆ ದಿನವು ಮುಕ್ತಾಯಗೊಂಡಿತ್ತು, ಮೋದಿ ಅವರು ಸ್ವಾಗತ ವೇದಿಕೆಯಿಂದ ಜಾಗತಿಕ ನಾಯಕರನ್ನು ಸ್ವಾಗತಿಸಿದರು, ಜತೆಗೆ ಬಿಹಾರದ ನಳಂದ ವಿಶ್ವವಿದ್ಯಾಲಯದ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು.

ಇತ್ತೀಚಿನ ಸುದ್ದಿ