ಕೊನೆಗೂ ಗಬ್ಬೆದ್ದಿತು ಶಾಸಕ, ಸಚಿವರ ಅನೈತಿಕ ಸಂಬಂಧ! - Mahanayaka
7:12 PM Thursday 16 - October 2025

ಕೊನೆಗೂ ಗಬ್ಬೆದ್ದಿತು ಶಾಸಕ, ಸಚಿವರ ಅನೈತಿಕ ಸಂಬಂಧ!

sudhakar
24/03/2021

ಬೆಂಗಳೂರು: ಕಳೆದ ಹಲವು ದಿನಗಳಿಂದ ಸಿಡಿ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಸಚಿವರುಗಳು ತಮ್ಮ ವಿಡಿಯೋ ಪ್ರಸಾರಕ್ಕೆ ತಡೆಯೊಡ್ಡುವಂತೆ ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಹಾಗೂ ವಿಪಕ್ಷಗಳ ಶಾಸಕರ ಹೇಳಿಕೆ ವಿರುದ್ಧ ರೊಚ್ಚಿಗೆದ್ದು ಹೇಳಿಕೆ ನೀಡಿರುವ ಸುಧಾಕರ್ 224 ಶಾಸಕರ ವಿರುದ್ಧವೂ ತನಿಖೆಯಾಗಲಿ. ಆಗ ಮರ್ಯಾದಾ ಪುರುಷೋತ್ತಮರ ವಿಚಾರಗಳೂ ಹೊರಗೆ ಬರಲಿ ಎಂದು ಸುಧಾಕರ್ ಹೇಳಿದರು.


Provided by

ನಮ್ಮ ಮೇಲೆ ಇಂದು ಆರೋಪ ಮಾಡುವವರ ಜೀವನದಲ್ಲಿ ಏನೇನು ನಡೆಯಿತು, ಅವರು ವೈಯಕ್ತಿಕ ಜೀವನದಲ್ಲಿ ಹೇಗಿದ್ದಾರೆ ಎಂದು ತನಿಖೆಯಾಗಲಿ, ಕೆಲವು ಮಾಜಿ ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಏನೇನು ಮಾಡಿದ್ದರು ಎಂದು ಎಲ್ಲವೂ ತನಿಖೆಯಾಗಲಿ, ನೈತಿಕತೆ, ಮೌಲ್ಯಗಳ ಪ್ರಶ್ನೆ ಬಗ್ಗೆ ಮಾತನಾಡುತ್ತಾರೆ,ಅವರಿಗೆ ನೈತಿಕತೆ ಬಗ್ಗೆ ಮಾತನಾಡಲು ಎಷ್ಟು ಹಕ್ಕಿದೆ ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷ ನಾಯಕರುಗಳು  ಅವರ ಜೀವನದಲ್ಲಿ ಎಷ್ಟು ಮಾದರಿಯಾಗಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ, ಎಲ್ಲಾ ಸಚಿವರುಗಳು, ಶಾಸಕರ ಬಗ್ಗೆ ತನಿಖೆಯಾಗಲಿ, ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ಅಫೈರ್ ಇದೆ ಎಂದು ರಾಜ್ಯದ 224 ಜನಪ್ರತಿನಿಧಿಗಳ ಬಗ್ಗೆ ಕೂಡ ತನಿಖೆಯಾಗಿ ಹೊರಬರಲಿ, ನಾನು ಬಹಿರಂಗವಾಗಿಯೇ ಸವಾಲು ಹಾಕುತ್ತಿದ್ದೇನೆ ಎಂದು ಅವರು ಹೇಳಿದರು.

ಶ್ರೀರಾಮಚಂದ್ರನಂತವರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೋ ಅವರಿಗೆ ಸವಾಲು ಹಾಕುತ್ತೇನೆ, ನನ್ನನ್ನು ಸೇರಿಸಿ 224 ಜನ ಶಾಸಕರು ತನಿಖೆ ಎದುರಿಸಲಿ, ಯಾರ್ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ತನಿಖೆಯಿಂದ ಹೊರಬರಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ

ಸಿಡಿಯಲ್ಲಿದ್ದ ಯುವತಿಯ ಜೊತೆ ಮತ್ತೋರ್ವ ಶಾಸಕ ಸಂಪರ್ಕದಲ್ಲಿ!

ಇತ್ತೀಚಿನ ಸುದ್ದಿ