ಮದುವೆಯಲ್ಲಿ ಡಾನ್ಸ್ ಮಾಡಿದ ಗಂಡನ ಮರ್ಮಾಂಗಕ್ಕೆ ಒದ್ದು ಕೊಂದ ಪತ್ನಿ!
20/03/2021
ಭೋಪಾಲ್: ಮದುವೆ ಸಮಾರಂಭದಲ್ಲಿ ಡಾನ್ಸ್ ವಿಚಾರವಾಗಿ ಪತ್ನಿಯು ಪತಿಯ ಮರ್ಮಾಂಗಕ್ಕೆ ಒದ್ದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಘುಗ್ರಿ ಗ್ರಾಮದಲ್ಲಿ ನಡೆದಿದೆ.
ಬುಧವಾರ ಘುಗ್ರಿ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಇದೇ ಗ್ರಾಮದ ಭರತ್ ಸಿಂಗ್ ಧ್ರುವೆ ಮತ್ತು ಆತನ ಪತ್ನಿ ಆವಂತಿ ಕೂಡ ಭಾಗವಹಿಸಿದ್ದರು. ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ವಿಚಾರವಾಗಿ ಪತಿ- ಪತ್ನಿಯ ನಡುವೆ ಜಗಳ ನಡೆದಿದೆ ಎಂದು ಹೇಳಲಾಗಿದೆ.
ಮನೆಗೆ ಹೋಗುವ ವೇಳೆ ದಾರಿ ಮಧ್ಯೆ ಪತಿ ಪತ್ನಿಯ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಜಗಳ ತಾರಕಕ್ಕೇರಿ ಕೋಪಗೊಂಡ ಆವಂತಿ, ಬಲವಾಗಿ ಗಂಡನ ಮರ್ಮಾಂಗಕ್ಕೆ ಝಾಡಿಸಿ ಒದ್ದಿದ್ದಾಳೆ. ಪರಿಣಾಮವಾಗಿ ಭರತ್ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.




























