ಅಮ್ಮನನ್ನು ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವತಿ! - Mahanayaka

ಅಮ್ಮನನ್ನು ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವತಿ!

sneha
20/03/2021

ದೊಡ್ಡಬಳ್ಳಾಪುರ: ಅಮ್ಮನನ್ನು ಹೆದರಿಸಲು ಹೋಗಿ ಯುವತಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ರಾಜೀವ್ ಗಾಂಧಿ ನಗರದ 18 ವರ್ಷ ವಯಸ್ಸಿನ ಯುವತಿ ಸ್ನೇಹ ಮೃತಪಟ್ಟ ಯುವತಿಯಾಗಿದ್ದಾಲೆ. ಈಕೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ 17 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಸ್ನೇಹಾ ನಿನ್ನೆ(ಮಾ.19)ರಂದು ಮೃತಪಟ್ಟಿದ್ದಾಳೆ.

ತನ್ನ ಸ್ನೇಹಿತರ ಜೊತೆಗೆ ಫೋನ್ ನಲ್ಲಿ ಮಗಳು ಹೆಚ್ಚಾಗಿ ಮಾತನಾಡುತ್ತಿದ್ದಾಳೆ ಎಂದು ಸ್ನೇಹಾಳ ತಾಯಿ, ಮಗಳಿಗೆ ಬುದ್ದಿ ಮಾತು ಹೇಳಿ ಬೈದಿದ್ದರು. ಅಮ್ಮ ಬೈದಿದ್ದರಿಂದ ಕೋಪಗೊಂಡ ಸ್ನೇಹಾ ಅಮ್ಮನನ್ನು ಹೆದರಿಸಬೇಕು ಎಂದು ಇಲಿ ಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇಲಿ ಪಾಷಾಣ ತಂದೊಡ್ಡುವ ಅಪಾಯದ ಬಗ್ಗೆ ತಿಳಿದಿರದ ಸ್ನೇಹಾ ಇಲಿಪಾಷಾಣ ತಿಂದು ತೀವ್ರವಾಗಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ಸತತ 17 ದಿನಗಳ ವರೆಗೆ ಸಾವು, ಬದುಕಿನ ನಡುವೆ ಹೋರಾಟ ನಡೆಸಿದ ಸ್ನೇಹಾ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ