ಈ ಯೋಗಾಸನ ಮಾಡಿದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ!
ಮನುಷ್ಯನನ್ನು ಕೊಲ್ಲದೇ ಕೊಲ್ಲುವ ರೋಗ ಅಂತಲೇ ಕರೆಯಲ್ಪಡುವ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಬಹಳ ಕಷ್ಟಕರವಾಗಿದೆ. ಸಾಕಷ್ಟು ಜನರು ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳನ್ನು ತೆಗೆದುಕೊಂಡು, ಅದರಿಂದ ಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಆದರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಲು ಯೋಗಾಸನದಿಂದ ಸಾಧ್ಯವಿದೆಯಂತೆ. ಪವನ ಮುಕ್ತಾಸನ ಮಾಡಿದ್ರೆ, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದಂತೆ. ಪವನ ಮುಕ್ತಾಸನ ಮಾಡುವುದರಿಂದ ಏನೇನು ಪ್ರಯೋಜನಗಳಿವೆ ಎನ್ನುವುದನ್ನು ಇಲ್ಲಿ ನೀಡಲಾಗಿದೆ.
ವಾಯು ನಿವಾರಣೆ: ಇದು ಮುಖ್ಯವಾಗಿ ಗ್ಯಾಸ್ ಅಂದರೆ ವಾಯು ಸಮಸ್ಯೆಗೆ ಪರಿಹಾರ ನೀಡುವ ಆಸನವಾಗಿದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ತುಂಬಿದ ಗಾಳಿಯನ್ನು ಹೊರಗಡೆ ಹಾಕಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಜೀರ್ಣಕಾರಿ ಅಂಗಗಳನ್ನು ಉತ್ತೇಜಿಸುತ್ತದೆ, ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ: ಸೆಳೆತ, ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ನೀವು ಈ ಆಸನವನ್ನು ಮಾಡಿ. ಬೇಗನೆ ಪರಿಣಾಮ ಬೀರುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳುತ್ತದೆ
ಬೆನ್ನು ನೋವು ನಿವಾರಣೆ: ಕೆಳ ಬೆನ್ನಿನ ಸ್ನಾಯುಗಳನ್ನು ಹಿಗ್ಗಿಸುತ್ತದೆ ಮತ್ತು ಸಡಿಲಗೊಳಿಸುತ್ತದೆ. ಇದರಿಂದಾಗಿ ನಿಮಗೆ ಬೆನ್ನು ಹುರಿ ನೋವಿದ್ದರೆ ಅದು ಸಹ ಕಡಿಮೆ ಆಗುತ್ತದೆ. ಸೊಂಟನೋವೂ ಕಡಿಮೆ ಆಗುತ್ತದೆ.
ಮುಟ್ಟಿನ ಸಮಸ್ಯೆ ನಿವಾರಣೆ: ಮುಟ್ಟಿನ ಸೆಳೆತ ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮುಟ್ಟಾದ ಸಂದರ್ಭದಲ್ಲಿ ಹೆಚ್ಚಾಗಿ ಸೊಂಟ ನೋವು ಕಾಡುವವರು ಈ ಆಸನವನ್ನು ಮಾಡಬಹುದು.
ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ: ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಆರಾಮಯದಾಯ ಅನುಭವವನ್ನು ನಿಮಗೆ ನೀಡುತ್ತದೆ. ಆದ್ದರಿಂದ ನೀವು ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ ಮಾಡಬಹುದು. ಮುಂದೆ ಬರಬಹುದಾದ ಸಮಸ್ಯೆಯನ್ನು ಇದು ತಡೆಯುತ್ತದೆ.
ಪವನ ಮುಕ್ತಾಸನ ಮಾಡುವುದು ಹೇಗೆ?
1. ನೇರವಾಗಿ ಕಾಲು ಬಿಡಿಸಿ, ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ.
2. ನಿಮ್ಮ ಎದೆಯ ಕಡೆಗೆ ಒಂದು ಮೊಣಕಾಲು ತನ್ನಿ.
3. ನಿಮ್ಮ ಕೈಯಿಂದ ಮೊಣಕಾಲು ಹಿಡಿದುಕೊಳ್ಳಿ.
4. ನಿಮ್ಮ ಎದೆಯ ಕಡೆಗೆ ಇನ್ನೊಂದು ಮೊಣಕಾಲನ್ನೂ ತಂದು ಒತ್ತಿರಿ
5. 5–10 ಸೆಕೆಂಡುಗಳು ಉಸಿರಾಟದ ನಿಯಂತ್ರಣ ಮಾಡಿ, ಅನುಲೋಮ, ವಿಲೋಮ ರೀತಿಯಲ್ಲಿ
6. ಮತ್ತೆ ಇದೇ ವಿಧಾನವನ್ನು ಪುನರಾವರ್ತಿಸಿ.
ಪವನ ಮುಕ್ತಾಸನ ಮಾತ್ರವಲ್ಲದೇ ಯಾವುದೇ ಯೋಗವನ್ನು ಕೂಡ ನಿಯಮ ಪ್ರಕಾರವಾಗಿ ಮಾಡಬೇಕು. ಹಾಗಾಗಿ ಅರ್ಹ ಬೋಧಕರ ಮಾರ್ಗದರ್ಶನ ಪಡೆದು ಈ ಯೋಗವನ್ನು ಅಭ್ಯಾಸ ಮಾಡುವುದು ಉತ್ತಮ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























