ಸಿಗರೇಟ್ ಮಾತ್ರವಲ್ಲ, ಊದುಬತ್ತಿಯ ಹೊಗೆಯೂ ಕ್ಯಾನ್ಸರ್ ಗೆ ಕಾರಣವಾಗಬಹುದು! - Mahanayaka
2:42 AM Friday 13 - September 2024

ಸಿಗರೇಟ್ ಮಾತ್ರವಲ್ಲ, ಊದುಬತ್ತಿಯ ಹೊಗೆಯೂ ಕ್ಯಾನ್ಸರ್ ಗೆ ಕಾರಣವಾಗಬಹುದು!

agarabathi
04/09/2024

ಸಿಗರೇಟ್ ನಿಂದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಬರುತ್ತವೆ ಎನ್ನುವುದನ್ನು ಕೇಳಿದ್ದೇವೆ. ಆದ್ರೆ ಅಗರಬತ್ತಿ ಅಥವಾ ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು ಬರುತ್ತವೆ ಎನ್ನುವುದನ್ನು ನೀವು ನಂಬುತ್ತೀರಾ? ನಂಬದಿದ್ದರೂ ಇದು ಸತ್ಯ.

ಸಿಗರೇಟ್ ಹೊಗೆಯಿಂದ ಕ್ಯಾನ್ಸರ್ ಬರುವಂತೆ, ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಬರುತ್ತಂತೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (Poly-Aromatic Hydrocarbons) ಕ್ಯಾನ್ಸರ್ ಗೆ ಕಾರಣವಾಗುತ್ತಂತೆ. ಮಾತ್ರವಲ್ಲದೇ ಉಸಿರಾಟದ ತೊಂದರೆಗಳಿಗೂ ಇದು ಕಾರಣವಾಗಬಹುದಂತೆ.

ಅಗರಬತ್ತಿಯಿಂದ ಆಗುವ ಹಾನಿಗಳೇನು?:


Provided by

* ಊದುಬತ್ತಿಯ ಹೊಗೆಯನ್ನು ನಿರಂತರವಾಗಿ ಉಸಿರಾಡುತ್ತಿದ್ದರೆ, ಹೃದಯದ ಜೀವಕೋಶಗಳ ಮೇಲೆ ಇದು ಪರಿಣಾಮ ಬೀರಿ, ಹೃದಯದ ಜೀವಕೋಶಗಳಿಗೆ ಹಾನಿಯಾಗಿ ಹೃದಯಾಘಾತಕ್ಕೆ ಕಾರಣವಾಗಬಹುದಂತೆ.

* ಊದುಬತ್ತಿಯಲ್ಲಿ ಬಳಸುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದಂತೆ.

* ಅಗರ ಬತ್ತಿಯಿಂದ ಹೊರ ಬರುವ ಕಾರ್ಬನ್ ಮೋನೋ ಆಕ್ಸೈಡ್ ಶ್ವಾಸಕೋಶದ ಮೇಲೆ ಹಾನಿಯುಂಟು ಮಾಡುತ್ತದೆ. ಇದರಿಂದಲೂ ಶೀತ ಮತ್ತು ಕೆಮ್ಮು ಸಮಸ್ಯೆ ಕಾಣಿಸಿಕೊಳ್ಳುತ್ತದೆ.

* ಹೊಗೆ ಬತ್ತಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಾಗಿದ್ದರೆ ಅಂತಹವರಿಗೆ ಅಗರಬತ್ತಿ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆಯಂತೆ.

* ಅಗರಬತ್ತಿಯಲ್ಲಿರುವ ನೈಟ್ರೊಜನ್ ಮತ್ತು ಸಲ್ಫರ್ ಡೈ ಆಕ್ಸೈಡ್ ಗಳು ಅಸ್ತಮಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಇತ್ತೀಚಿನ ಸುದ್ದಿ