ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುತ್ತಿದ್ದೀರಾ?: ಇದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ? - Mahanayaka
6:34 PM Saturday 14 - September 2024

ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುತ್ತಿದ್ದೀರಾ?: ಇದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

water botel
04/09/2024

ನೀರು ಕುಡಿಯುವುದು ನಮ್ಮ ದೇಹದ ಆರೋಗ್ಯದಲ್ಲಿ ಪ್ರಮುಖ ಅಂಶವಾಗಿದೆ. ಆದ್ರೆ ಶುದ್ಧ ನೀರು ಈಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಕೆಲವೊಮ್ಮೆ ನಾವು ಶುದ್ಧ ನೀರು ಎಂದು ಭಾವಿಸಿ, ಅಂಗಡಿಗಳಲ್ಲಿರುವ ಪ್ಲಾಸ್ಟಿಕ್ ಬಾಟಲಿಗಳ ನೀರು ಕುಡಿಯುತ್ತೇವೆ. ಆದ್ರೆ ಇದು ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ತಿಳಿದರೆ ನಿಜವಾಗಿಯೂ ಇನ್ನೊಮ್ಮೆ ನೀವು ಆ ತಪ್ಪು ಮಾಡಲಾರಿರಿ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿಟ್ಟ ನೀರು ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ನ್ಯೂಯಾರ್ಕ್ನ ಫ್ರೆಡೋನಿಯಾದಲ್ಲಿರುವ ಸ್ಟೇಟ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಮಾರುಕಟ್ಟೆಯಲ್ಲಿ ದೊರೆಯುವ ಬಾಟಲಿ ನೀರಿನಲ್ಲಿ ಮೈಕ್ರೊ ಪ್ಲಾಸ್ಟಿಕ್ ಕಣಗಳಿದ್ದು ಶೇ. 90 ರಷ್ಟು ಕಲುಷಿತಗೊಂಡಿದೆ ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇಂತಹ ನೀರು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.


Provided by

ಭಾರತ, ಚೀನಾ, ಅಮೆರಿಕ, ಇಂಡೋನೇಷ್ಯಾ, ಮೆಕ್ಸಿಕೊ, ಲೆಬನಾನ್, ಕೀನ್ಯಾ ದೇಶಗಳ 19 ಬೇರೆ ಬೇರೆ ಪ್ರದೇಶದಿಂದ ಒಟ್ಟು 11 ಕಂಪೆನಿಗಳ 259 ಬಾಟಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಕೇವಲ 17 ನೀರಿನ ಬಾಟಲಿ ಯೋಗ್ಯವೆಂದು ದೃಢವಾಗಿದೆ. ಪಾಲಿಪ್ರೊಪಿಲೀನ್ ಎಂಬ ಪ್ಲಾಸ್ಟಿಕ್ ಕಣಗಳು ಉಳಿದ ನೀರಿನ ಬಾಟಲಿಗಳಲ್ಲಿ ಹೆಚ್ಚು ಕಂಡುಬಂದಿದ್ದು, ಪ್ರತಿ ಲೀಟರ್ಗೆ ಶೇ. 58.6 ರಷ್ಟು ಪ್ಲಾಸ್ಟಿಕ್ ಫೈಬರ್ ಸಿಕ್ಕಿದೆ.
ಇವು ಹೆಚ್ಚಾಗಿ ಕಾರ್ಖಾನೆಗಳ ಫ್ಯಾ ನ್‍ಗಳಿಂದ ಗಾಳಿಯಲ್ಲಿ ಹರಡಿ ನೀರಿಗೆ ಸೇರಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಾಕಷ್ಟು ಜನರು ತಾವು ಮಾರುಕಟ್ಟೆಯಲ್ಲಿ ಖರೀದಿಸಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮನೆಯಲ್ಲೂ ನೀರು ತುಂಬಿಸಿಟ್ಟು ಕುಡಿಯುತ್ತಾರೆ. ಕೆಲವರು ಬಹಳಷ್ಟು ಕಾಲಗಳ ವರೆಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಳಸುವುದಿದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಎಲ್ಲೇ ಹೋಗುವುದಿದ್ದರೂ, ಮನೆಯಿಂದಲೇ ನೀರು ಕುದಿಸಿ, ಸ್ಟೀಲ್ ಅಥವಾ ಗಾಜಿನ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುವುದು ಉತ್ತಮ. ಇತ್ತೀಚೆಗೆ ಹೊರಗೆ ಸಿಗುವ ನೀರು ಮಾತ್ರವಲ್ಲದೇ ಆಹಾರ ವಸ್ತುಗಳು ಎಷ್ಟು ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೊರಗಿನ ಆಹಾರ ಪದಾರ್ಥಗಳ ಬಳಕೆ ಕಡಿಮೆ ಮಾಡುವುದು ಉತ್ತಮ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಇತ್ತೀಚಿನ ಸುದ್ದಿ