ಗಾಝಾ ಯುದ್ಧ ಯಂತ್ರವು ಅಮೆರಿಕದ ಕೈಯಲ್ಲಿದೆ: ಇಸ್ರೇಲ್ ಬಾಂಬ್ ಸ್ಫೋಟದ ಬಗ್ಗೆ ಇರಾನ್ ಅಧ್ಯಕ್ಷ ಹೇಳಿಕೆ - Mahanayaka
10:18 PM Friday 19 - December 2025

ಗಾಝಾ ಯುದ್ಧ ಯಂತ್ರವು ಅಮೆರಿಕದ ಕೈಯಲ್ಲಿದೆ: ಇಸ್ರೇಲ್ ಬಾಂಬ್ ಸ್ಫೋಟದ ಬಗ್ಗೆ ಇರಾನ್ ಅಧ್ಯಕ್ಷ ಹೇಳಿಕೆ

12/11/2023

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಯುಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಮಾಸ್ ವಿರುದ್ಧದ ಯುದ್ಧ ಮಾಡುತ್ತಿರುವ ಇಸ್ರೇಲ್ ‌ “ಮುಖ್ಯ ಅಪರಾಧಿ” ಎಂದು ಆರೋಪಿಸಿದ್ದಾರೆ. ಹಮಾಸ್ ಆಡಳಿತದಲ್ಲಿರುವ ಫೆಲೆಸ್ತೀನ್ ಪ್ರದೇಶವಾದ ಗಾಝಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕ್ರಮಗಳಿಗಾಗಿ ತೈಲ ಮತ್ತು ಸರಕು ನಿರ್ಬಂಧಗಳನ್ನು ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಗಾಝಾದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸೌದಿ ಅರೇಬಿಯಾ ಆಯೋಜಿಸಿದ್ದ ತುರ್ತು ಜಂಟಿ ಅರಬ್-ಇಸ್ಲಾಮಿಕ್ ಶೃಂಗಸಭೆಯಲ್ಲಿ ಮಾತನಾಡಿದ ರೈಸಿ, ಇಸ್ರೇಲ್ ಗೆ ಮಿಲಿಟರಿ ನೆರವು ನೀಡಿದ್ದಕ್ಕಾಗಿ ಯುಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಯಹೂದಿ ರಾಷ್ಟ್ರವು ಮುತ್ತಿಗೆ ಹಾಕಿದ ಪ್ರದೇಶದ ಮೇಲೆ “ಏಳು ಪರಮಾಣು ಬಾಂಬ್ ಗಳಿಗೆ” ಸಮಾನವಾದ ಬಾಂಬ್ ಗಳನ್ನು ಹಾಕಿದೆ ಎಂದು ಹೇಳಿದ್ದಾರೆ.

ಯುಎಸ್ ಸರ್ಕಾರವು ಈ ಅಪರಾಧದ ಮುಖ್ಯ ಅಪರಾಧಿ ಮತ್ತು ಸಹವರ್ತಿಯಾಗಿದೆ. ಸಾವಿರಾರು ತುಳಿತಕ್ಕೊಳಗಾದ ಫೆಲೆಸ್ತೀನ್ ಮಕ್ಕಳ ಪವಿತ್ರ ಜೀವನಕ್ಕಿಂತ ಇಸ್ರೇಲ್ ಅನ್ನು ಬೆಂಬಲಿಸಲು ಅಮೆರಿಕ ಆದ್ಯತೆ ನೀಡಿದೆ. ಆಕ್ರಮಿತ ಪ್ರದೇಶಗಳಲ್ಲಿ ತಕ್ಷಣವೇ ತನ್ನ ಭದ್ರತಾ ಕ್ಯಾಬಿನೆಟ್ ಅನ್ನು ರಚಿಸುವ ಮೂಲಕ ಗಾಜಾದ ಅಸಹಾಯಕ ಜನರ ವಿರುದ್ಧ ಕ್ರಿಮಿನಲ್ ಕಾರ್ಯಾಚರಣೆಗಳನ್ನು ನಡೆಸಲು ಅಮೆರಿಕವು ಜಿಯೋನಿಸ್ಟ್ ಆಡಳಿತವನ್ನು ಪ್ರೋತ್ಸಾಹಿಸಿದೆ ಮತ್ತು ಅದನ್ನು ಕಾನೂನುಬದ್ಧ ರಕ್ಷಣೆ ಎಂದು ಕರೆದಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ