ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದವರ ಮಾಹಿತಿ ನೀಡಿದವರಿಗೆ 500 ರೂ. ಬಹುಮಾನ! - Mahanayaka

ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದವರ ಮಾಹಿತಿ ನೀಡಿದವರಿಗೆ 500 ರೂ. ಬಹುಮಾನ!

no parking
18/06/2022

ನವದೆಹಲಿ: ಅಕ್ರಮ ಪಾರ್ಕಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 500 ರೂಪಾಯಿ ಬಹುಮಾನ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಹೊಸ ಪ್ರಸ್ತಾವನೆಯು ರಸ್ತೆಗಳಲ್ಲಿ ಅಕ್ರಮ ನಿಲುಗಡೆಗೆ ಕಡಿವಾಣ ಹಾಕುವ ಪ್ರಯತ್ನದ ಭಾಗವಾಗಿದೆ. ಮೋಟಾರು ವಾಹನ ನಿಯಮಗಳಿಗೆ ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.  ಹೊಸ ವಿಧಾನ ಜಾರಿಯಾದಾಗ ಚಿತ್ರಗಳ ಸಮೇತ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದಿದ್ದಾರೆ.

ವಾಹನ ಮಾಲೀಕರಿಗೆ ವಿಧಿಸುವ ದಂಡದ ಅರ್ಧದಷ್ಟು 500 ರೂ. ಬಹುಮಾನ ಚಿತ್ರ ಕಳುಹಿಸುವವರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.  ದಿನೇ ದಿನೇ ರಸ್ತೆಯಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿದ್ದು, ಸರಿಯಾಗಿ ವಾಹನವನ್ನು ರಸ್ತೆಯಲ್ಲಿ ಪಾರ್ಕಿಂಗ್ ಮಾಡದೆ ಇರುವುದು ದೊಡ್ಡ ತಲೆನೋವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಗೆ ಎಸಿಬಿ ದಾಳಿ: ಸಿಕ್ಕಿದ  ಚಿನ್ನಾಭರಣಗಳೆಷ್ಟು ಗೊತ್ತಾ?

ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಫಲಿತಾಂಶ ನೋಡುವುದು ಹೇಗೆ?

ಸಾಯಿ ಪಲ್ಲವಿ ನಟನೆಯ  ‘ವಿರಾಟ ಪರ್ವಂ’ ಬಹಿಷ್ಕಾರಕ್ಕೆ ಬಲಪಂಥೀಯರ ಕರೆ!

ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿಯ ಅನುಮಾನಾಸ್ಪದ ಸಾವು!

ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ

ಇತ್ತೀಚಿನ ಸುದ್ದಿ