ಎಂಗೇಜ್ ಮೆಂಟ್ ಆದ ಯುವತಿಗೆ ಪೊಲೀಸರಿಂದಲೇ ಲೈಂಗಿಕ ಕಿರುಕುಳ: ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ - Mahanayaka
8:06 PM Saturday 14 - September 2024

ಎಂಗೇಜ್ ಮೆಂಟ್ ಆದ ಯುವತಿಗೆ ಪೊಲೀಸರಿಂದಲೇ ಲೈಂಗಿಕ ಕಿರುಕುಳ: ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ

01/10/2023

ಪಾರ್ಕ್‌ನಲ್ಲಿ ಭಾವಿ ಪತಿಯೊಂದಿಗೆ ಕುಳಿತಿದ್ದ ಯುವತಿಗೆ ಇಬ್ಬರು ಪೊಲೀಸರು ಸೇರಿದಂತೆ ಮೂವರು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಮದುವೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಯುವತಿಯೊಬ್ಬಳು ಗಾಜಿಯಾಬಾದ್‌ನ ಸಾಯಿ ಉಪ್ವಾನ್ ನಗರದ ಪಾರ್ಕ್ ಗೆ ಭೇಟಿ ನೀಡಲು ಹೋಗಿದ್ದರು. ಆಗ ಇಬ್ಬರು ಪೊಲೀಸರು ಮತ್ತು ಇನ್ನೊಬ್ಬ ವ್ಯಕ್ತಿ ಸರಳ ಉಡುಪಿನಲ್ಲಿ ಬಂದಿದ್ದು, ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ತಮ್ಮಿಂದ 10,000 ರೂ. ದೋಚಿದ್ದಾರೆ ಎಂದು ಯುವತಿ ಕೊತ್ವಾಲಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೇ ವೇಳೆ ಪೊಲೀಸರು ನಿಶ್ಚಿತ ವರನಿಗೆ ಕಪಾಳಮೋಕ್ಷ ಮಾಡಿದ್ದು ಹಾಗೂ ಯುವತಿಯ ಖಾಸಗಿ ಅಂಗಗಳಿಗೆ ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಅಲ್ಲದೇ ಯುವತಿಗೆ ಪದೇಪದೇ ಕರೆ ಮಾಡಿದ್ದಾರೆ. ತಡರಾತ್ರಿ ಮನೆಗೆ ಬಂದು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ತಮ್ಮೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆಗ ಯುವತಿ ಸಹಾಯಕ್ಕಾಗಿ ಪೊಲೀಸ್ ತುರ್ತು ಸಂಖ್ಯೆಗೆ ಡಯಲ್ ಮಾಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಯುವತಿಯ ದೂರನ್ನು ಗಾಜಿಯಾಬಾದ್ ಪೊಲೀಸರಿಗೆ ರವಾನಿಸಿದರು.

ಮೂವರು ಆರೋಪಿಗಳಾದ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್, ಹೋಮ್ ಗಾರ್ಡ್ ದಿಗಂಬರ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೂವರೂ ಆರೋಪಿಗಳು ಸದ್ಯ ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ. ರಾಕೇಶ್ ಕುಮಾರ್ ನನ್ನು ಅಮಾನತುಗೊಳಿಸಲಾಗಿದ್ದು, ದಿಗಂಬರ್ ವಿರುದ್ಧ ಕ್ರಮಕ್ಕೆ ಇಲಾಖೆಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ಸಹಾಯಕ ಆಯುಕ್ತರು ಹೇಳಿಕೆ ನೀಡಿದ್ದಾರೆ.


Provided by

ಇತ್ತೀಚಿನ ಸುದ್ದಿ