ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ - Mahanayaka
11:33 AM Wednesday 15 - October 2025

ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್

ghulam nabi azad
21/03/2022

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ್ದಾರೆ.


Provided by

ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಗುಲಾಂ ನಬಿ ಆಜಾದ್ ಅವರ ಗೌರವಾರ್ಥ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಸೇವೆ ಮಾಡಲು ರಾಜಕೀಯ ಬೇಕಿಲ್ಲ.  ಭಾರತದಲ್ಲಿ ಈವಾಗ ರಾಜಕೀಯ ಕೆಟ್ಟ ಸ್ಥಿತಿಯಲ್ಲಿದೆ..  ತಮ್ಮ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ ಎಂದ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ ನ ಒಳಜಗಳದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಬದಲಾವಣೆ ತರಬೇಕು, ಮುಂದೊಂದು ದಿನ ನಾನು ರಾಜಕೀಯದಿಂದ ನಿವೃತ್ತಿ ಪಡೆದು ಸಮಾಜ ಸೇವೆ ಆರಂಭಿಸಿದ್ದೇನೆ ಎಂದು ತಿಳಿದರೆ ಅದೇನು ದೊಡ್ಡ ವಿಷಯವಲ್ಲ, ಸಮಾಜದಲ್ಲಿ ಬದಲಾವಣೆ ತರಲು ಯಾವುದೇ ರಾಜಕೀಯ ಪಕ್ಷಗಳ ಸಾಮರ್ಥ್ಯದ ಬಗ್ಗೆ ಅನುಮಾನ ಇದೆ ಎಂದರು.

ನಾವು ಜನರನ್ನು ಪ್ರದೇಶ, ಗ್ರಾಮ ಮತ್ತು ನಗರಗಳ ಆಧಾರದ ಮೇಲೆ ವಿಭಜಿಸುತ್ತೇವೆ.  ದಲಿತರು, ಮೇಲ್ಜಾತಿಗಳು, ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರನ್ನು ಸಹ ವಿಭಜಿಸುತ್ತದೆ ಎಂದು  ಗುಲಾಂ ನಬಿ ಆಜಾದ್ ಹೇಳಿದರು.

ನಾವು ಜನರನ್ನು ಅವರ ಸ್ವಂತ ಜಾತಿಗೆ ಇಳಿಸಿದರೆ, ನಾವು ಯಾರನ್ನು ಮನುಷ್ಯರಂತೆ ನೋಡಬಹುದು? ರಾಜಕೀಯ ಪಕ್ಷಗಳು ಧರ್ಮ, ಜಾತಿ ಮತ್ತು ಇತರ ಅಂಶಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು. ನಾಗರಿಕ ಸಮಾಜ ಒಟ್ಟಾಗಿ ನಿಲ್ಲಬೇಕು.  ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪರೀಕ್ಷೆಗೆ ಹೋದ 15 ವರ್ಷದ ಹುಡುಗಿಗೆ ಮದುವೆ : ವರ ಬಂಧನ

ರೈಲ್ವೇ ನಿಲ್ದಾಣದ ಶೌಚಾಲಯದಲ್ಲಿ ಯುವತಿ ಮೇಲೆ ಅತ್ಯಾಚಾರ

ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದಿಕ್ಕಿದ  ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್

ಪಾನ್‌-ಆಧಾರ್ ಲಿಂಕ್: ಮಾರ್ಚ್ 31ಕೊನೆ ದಿನಾಂಕ

ಫುಟ್ಬಾಲ್ ಗ್ಯಾಲರಿ ಕುಸಿತ -200ಕ್ಕೂ ಹೆಚ್ಚು ಮಂದಿಗೆ ಗಾಯ

ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ

 

ಇತ್ತೀಚಿನ ಸುದ್ದಿ