ಬಿಡದಿಯಲ್ಲಿ ಬಾಲಕಿಯ ಸಾವು ಪ್ರಕರಣ: ಅತ್ಯಾಚಾರ ನಡೆದಿಲ್ಲ ಎಂದು FSL ವರದಿ:  ಎಸ್ಪಿ‌ ಸುದ್ದಿಗೋಷ್ಠಿ - Mahanayaka

ಬಿಡದಿಯಲ್ಲಿ ಬಾಲಕಿಯ ಸಾವು ಪ್ರಕರಣ: ಅತ್ಯಾಚಾರ ನಡೆದಿಲ್ಲ ಎಂದು FSL ವರದಿ:  ಎಸ್ಪಿ‌ ಸುದ್ದಿಗೋಷ್ಠಿ

bidadi case
17/05/2025


Provided by

ರಾಮನಗರ: ಬಿಡದಿಯಲ್ಲಿ ನಡೆದಿದ್ದ ಬಾಲಕಿ ಸಾವು ಪ್ರಕರಣದ ಎಫ್​ ಎಸ್​​ ಎಲ್​ ವರದಿ ಬಂದಿದ್ದು, ವರದಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಆಗಿರೋದು ಕಂಡುಬಂದಿಲ್ಲ ಎಂದು ರಾಮನಗರ ಎಸ್ಪಿ‌ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ತಾನೇ ಬಾಲಕಿ ಹತ್ಯೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಬಂದಿದ್ದು, ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಗಿರೋದು ಕಂಡು ಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಜನರನ್ನು ವಿಚಾರಣೆ ಮಾಡಿದ್ದೇವೆ. ಅದರಲ್ಲಿ ಯಾರ ಪಾತ್ರವೂ ಕಂಡು ಬಂದಿಲ್ಲ ಎಂದರು.

ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ಅತ್ಯಾಚಾರ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಯಾವುದೇ ರೀತಿಯ ಅತ್ಯಾಚಾರ ಆಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮೃತ ಬಾಲಕಿ ತಲೆಗೆ ಹಾಗೂ ಮೈ ಮೇಲೆ ಗಾಯಗಳಾಗಿವೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರಬೇಕಾಗಿದೆ. ಪೋಸ್ಟ್ ಮಾರ್ಟಮ್ ನಲ್ಲಿ ಏನಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ. ಮೇಲ್ನೋಟಕ್ಕೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿರಬಹುದು ಅನ್ನೋದು ಗೊತ್ತಾಗ್ತಿದೆ. ಮರಣೋತ್ತರ ಪರೀಕ್ಷೆ ಬಂದ ಬಂತರ ಸ್ಪಷ್ಟ ಚಿತ್ರಣ ಬರಲಿದೆ ಎಂದು ಪ್ರಕರಣದ ಮಾಹಿತಿ ನೀಡಿದರು.

ಇನ್ನೋ ಸೋಷಿಯಲ್ ಮೀಡಿಯಾಗಳಲ್ಲಿ ಅತ್ಯಾಚಾರ ಎಸಗಿದ್ದಾರೆ, ಮೈಮೇಲೆ ಸಿಗರೇಟ್ ನಿಂದ ಸುಟ್ಟಗಾಯಗಳಾಗಿವೆ ಅಂತೆಲ್ಲ ಹೇಳಿದ್ದಾರೆ. ಆ ರೀತಿ ಯಾವುದೇ ಗಾಯಗಳು ಮೈಮೇಲೆ ಇಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳನ್ನು ಬಿಂಬಿಸಲಾಗಿದೆ ಅಂತ ಅವರು ಆಪಾದಿಸಿದರಲ್ಲದೇ, ಸುಳ್ಳು ಸುದ್ದಿ ತೋರಿಸಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ