ಕನ್ನಡಿಗರನ್ನು ಅವಮಾನಿಸುವ ಡಿಸ್ ಪ್ಲೇ ಪ್ರದರ್ಶನ: ಹೊಟೇಲ್ ಮ್ಯಾನೇಜರ್ ಅರೆಸ್ಟ್, ಹೊಟೇಲ್ ಸೀಝ್, ಮಾಲಿಕನ ವಿರುದ್ಧ ಪ್ರಕರಣ ದಾಖಲು - Mahanayaka

ಕನ್ನಡಿಗರನ್ನು ಅವಮಾನಿಸುವ ಡಿಸ್ ಪ್ಲೇ ಪ್ರದರ್ಶನ: ಹೊಟೇಲ್ ಮ್ಯಾನೇಜರ್ ಅರೆಸ್ಟ್, ಹೊಟೇಲ್ ಸೀಝ್, ಮಾಲಿಕನ ವಿರುದ್ಧ ಪ್ರಕರಣ ದಾಖಲು

gs suite hotel
18/05/2025

ಬೆಂಗಳೂರು: ಕೋರಮಂಗಲ ಜಿ.ಎಸ್​.ಸೂಟ್​ ಹೋಟೆಲ್ ​ನಲ್ಲಿ ಕನ್ನಡಿಗರನ್ನು ನಿಂದಿಸುವ ಡಿಸ್ ಪ್ಲೇ ಬೋರ್ಡ್ ಹಾಕಿ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದ್ದು, ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ.

ಜೊತೆಗೆ  ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್ ​ಐಆರ್​ ದಾಖಲಿಸಲಾಗಿದೆ. ಕೋರಮಂಗಲದ‌‌ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್​.ಸೂಟ್​ ಹೋಟೆಲ್​ ಇದೆ. ಈ ಹೋಟೆಲ್​​ ನ ಹೊರಭಾಗದ ಡಿಸ್​ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಡಿವಾಳ ಪೊಲೀಸರು ಹೋಟೆಲ್​ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಅಬ್ದುಲ್ ‌ಸಮಾದ್ ಹಾಗೂ ಮ್ಯಾನೇಜರ್ ​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಜೊತೆಗೆ ಡಿಸ್​ ಪ್ಲೇ ಬೋರ್ಡ್ ವಶಕ್ಕೆ ಪಡೆದು, ಹೋಟೆಲ್ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.‌

ಕಳೆದ ಮೂರು ವರ್ಷದಿಂದ ಕೋರಮಂಗಲದ ಓರ್ವ ವ್ಯಕ್ತಿ ಈ ಡಿಸ್ ​ಪ್ಲೇ ಬೋರ್ಡ್ ನಿರ್ವಹಣೆ ಮಾಡ್ತಿದ್ದಾರಂತೆ. ಡಿಸ್ ​ಪ್ಲೇ ಕಂಟ್ರೋಲರ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೊಟೇಲ್ ಮಾಲೀಕರು ಆರೋಪಿಸಿದ್ದಾರೆ. ಈ ಘಟನೆಯ ಸತ್ಯಾಂಶ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ