ವಿನೇಶ್ ಗೆ ಒಲಿಂಪಿಕ್ ಪದಕ ಕೈತಪ್ಪಿದ್ದು ದೇವರು ನೀಡಿರುವ ಶಿಕ್ಷೆ: ಬಿಜೆಪಿ ಮುಖಂಡ ಬ್ರಿಜ್ ಭೂಷಣ್ - Mahanayaka
9:24 PM Thursday 7 - November 2024

ವಿನೇಶ್ ಗೆ ಒಲಿಂಪಿಕ್ ಪದಕ ಕೈತಪ್ಪಿದ್ದು ದೇವರು ನೀಡಿರುವ ಶಿಕ್ಷೆ: ಬಿಜೆಪಿ ಮುಖಂಡ ಬ್ರಿಜ್ ಭೂಷಣ್

07/09/2024

ವಿನೇಶ್ ಪೋಗಟ್ ಗೆ ಒಲಿಂಪಿಕ್ಸ್ ನಲ್ಲಿ ಪದಕ ಕೈತಪ್ಪಿರುವುದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಬಿಜೆಪಿ ಮುಖಂಡ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಇವರ ವಿರುದ್ಧ ವಿನೇಶ್ ಪೊಗಟ್ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸಹಿತ ಕುಸ್ತಿಪಟುಗಳು ಹೋರಾಟ ನಡೆಸಿದ್ದರು.

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇವರ ಮೇಲಿದೆ. ಇದೀಗ ವಿನೇಶ್ ಪೊಗಟ್ ಕಾಂಗ್ರೆಸ್ ಸೇರ್ಕೊಂಡಿದ್ದು ಇದೆ ವೇಳೆ ಪೊಗಟ್ ಗೆ ಒಲಿಂಪಿಕ್ಸ್ ಪದಕ ಕೈ ತಪ್ಪಿರುವುದನ್ನು ಸಿಂಗ್ ಸಂಭ್ರಮಿಸಿದ್ದಾರೆ.

ಇನ್ನೊರ್ವ ಕ್ರೀಡಾಪಟುವಿನ ಅವಕಾಶವನ್ನು ಕಸಿದುಕೊಂಡು ಒಲಂಪಿಕ್ಸ್ ನಲ್ಲಿ ವಿನೇಶ್ ಪೊಗಟ್ ಸ್ಪರ್ಧಿಸಿದ್ದರು ಎಂದು ಭೂಷಣ್ ಆರೋಪಿಸಿದ್ದಾರೆ. ಭಜರಂಗ್ ಪುನಿಯಾ ಅವರು ಟ್ರಯಲ್ಸ್ ನಲ್ಲಿ ಭಾಗವಹಿಸದೆಯೇ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದರು ಎಂದು ಕೂಡ ಅವರು ಆರೋಪಿಸಿದ್ದಾರೆ.

ವಿನೇಶ್ ಪೋಗಟ್ ಅವರನ್ನು ತನ್ನ ವಿರುದ್ಧ ತಿರುಗಿಸಿದ್ದು ಕಾಂಗ್ರೆಸ್ ಆಗಿದೆ. ಹರಿಯಾಣದಲ್ಲಿ ಬಿಜೆಪಿಗಾಗಿ ನಾನು ಪ್ರಚಾರ ಮಾಡುವೆ ಎಂದು ಹೇಳಿರುವ ಅವರು ವಿನೇಶ್ ಪೊಗಟ್ ಅವರನ್ನು ಬಿಜೆಪಿಯ ಯಾವುದೇ ಸ್ಪರ್ಧಿಗೂ ಸೋಲಿಸಲು ಸಾಧ್ಯ ಎಂದು ಕೂಡ ಅವರು ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹರಿಯಾಣದ ಜುಲಾನ್ ವಿಧಾನಸಭಾ ಕ್ಷೇತ್ರದಿಂದ ವಿನೇಶ್ ಪೋಗಾಟ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ