ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ:  ಕಾಂಗ್ರೆಸ್ ಮುಖಂಡ ಅರೆಸ್ಟ್ - Mahanayaka
10:25 AM Sunday 28 - December 2025

ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ:  ಕಾಂಗ್ರೆಸ್ ಮುಖಂಡ ಅರೆಸ್ಟ್

06/04/2025

ಕೋಲಾರ:  ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಕೆಜಿಎಫ್ ಕಾಂಗ್ರೆಸ್ ಮುಖಂಡ ಹಾಗೂ ಹಾಲಿ ನಗರಸಭೆ ಸದಸ್ಯ ಜಯಪಾಲ್​ ರನ್ನು ಬಂಧಿಸಲಾಗಿದೆ.

ಏಪ್ರಿಲ್ 2 ರಂದು ರಾತ್ರಿ  ತಮಿಳುನಾಡಿನ ಚೆನೈ ನಿಂದ ಕೆಜಿಎಫ್​ಗೆ ಬರುತ್ತಿದ್ದ ಚಿನ್ನದ ವ್ಯಾಪಾರಿ ಚೇತನ್ ಜೈನ್ ಎಂಬುವವರ ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನವನ್ನು ತಂಡ ದೋಚಿತ್ತು. ವಿ.ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಕೆಜಿಎಫ್ ​ನ ಜಯಪಾಲ್, ಜಯಪಾಲ್ ಕಾರು ಚಾಲಕ ಮುಕ್ರಂ‌ ಪಾಷಾ ಹಾಗೂ ತಮಿಳುನಾಡಿನ ಇಬ್ಬರು ಸೇರಿ ಆಂಧ್ರ ಹಾಗೂ ತಮಿಳುನಾಡು ಗಡಿ ನಾಯಕನೇರಿ ಘಾಟ್ ಬಳಿ ದರೋಡೆ ಮಾಡಿದ್ದರು. ಸದ್ಯ ವಿಕೋಟ ಪೊಲೀಸರುರಾಬರಿ ಮಾಡಿದ್ದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ