ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್ ನಿಂದ ಲೈಂಗಿಕ ದೌರ್ಜನ್ಯ: ಫೋನ್ ನಲ್ಲಿ ಹಲವು ವಿಡಿಯೋಗಳು ಪತ್ತೆ - Mahanayaka

ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್ ನಿಂದ ಲೈಂಗಿಕ ದೌರ್ಜನ್ಯ: ಫೋನ್ ನಲ್ಲಿ ಹಲವು ವಿಡಿಯೋಗಳು ಪತ್ತೆ

badminton Coach
05/04/2025

ಬೆಂಗಳೂರು: ಬ್ಯಾಡ್ಮಿಂಟನ್ ತರಬೇತುದಾರನೊಬ್ಬ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


Provided by

ತಮಿಳುನಾಡು ಮೂಲದ ಸುರೇಶ್ ಬಾಲಾಜಿ(26) ಎಂಬಾತ ಆರೋಪಿತ ಬ್ಯಾಡ್ಮಿಂಟನ್ ಕೋಚ್ ಆಗಿದ್ದಾನೆ. ಈತ ಕಳೆದ ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್ ಗೆ ಸೇರಿದ್ದ ಬಾಲಕಿಯನ್ನು ಆಗಾಗ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿ, ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.

ಬಾಲಕಿ ಒಂದು ದಿನದ ರಜೆಯ ಹಿನ್ನೆಲೆ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಇದೇ ವೇಳೆ ತನ್ನ ನಗ್ನ ಫೋಟೋವನ್ನು ಸುರೇಶ್ ಗೆ ಕಳುಹಿಸಿದ್ದಳು. ಬಾಲಕಿಯ ಮೊಬೈಲ್ ನ್ನು ಬಾಲಕಿಯ ಅಜ್ಜಿ ಗಮನಿಸಿದಾಗ ಸುರೇಶ್ ಗೆ ನಗ್ನ ಫೋಟೋ ಕಳುಹಿಸಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ.

ಅಜ್ಜಿ ಕೂಡಲೇ ವಿಚಾರವನ್ನು ಬಾಲಕಿಯ ತಂದೆ ತಾಯಿಗೆ ತಿಳಿಸಿದ್ದಾರೆ. ವಿಚಾರಿಸಿದಾಗ ಸುರೇಶ್ ನ ನೀಚ ಕೃತ್ಯ ಬಯಲಿಗೆ ಬಂದಿದೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.

ಇದೇ ವೇಳೆ ಆರೋಪಿ ಸುರೇಶ್ ನ ಮೊಬೈಲ್ ನಲ್ಲಿ 13ರಿಂದ 16 ವರ್ಷದೊಳಗಿನ ಹಲವು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವಿಡಿಯೋ, ನಗ್ನ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ.

ಸದ್ಯ ಆರೋಪಿಯನ್ನು 8 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಇತರ ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ