ಚಿನ್ನದ ಬೆಲೆ ಇಳಿಕೆ: ರಾಜ್ಯದಲ್ಲಿ ಇಂದು ಎಷ್ಟಿದೆ ಚಿನ್ನದ ಬೆಲೆ? - Mahanayaka

ಚಿನ್ನದ ಬೆಲೆ ಇಳಿಕೆ: ರಾಜ್ಯದಲ್ಲಿ ಇಂದು ಎಷ್ಟಿದೆ ಚಿನ್ನದ ಬೆಲೆ?

gold rate
20/05/2025

Gold Price Today — ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ರೂ. ಸೋಮವಾರ 96,550 ರೂ. ಇತ್ತು. ಮಂಗಳವಾರವು ಕೂಡಾ ಸುಮಾರು 490 ರಿಂದ ರೂ. ಇಳಿಕೆಯೊಂದಿಗೆ ಒಂದು ತೊಲ ಬಂಗಾರ 96,060ಗೆ ವಹಿವಾಟು ನಡೆಸುತ್ತಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ. ಸೋಮವಾರ 98,735 ರೂ.ಗಳಿಷ್ಟಿತ್ತು. ಇಂದು ಸುಮಾರು 1150 ರೂ ಗಳಷ್ಟು ಕುಸಿತ ಕಾಣುವ ಮೂಲಕ 97,583 ರೂ.ಗೆ ಬಂದಿದೆ.

ಬೆಂಗಳೂರಿನಲ್ಲಿ 99.9 ಫ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 96 152 ರೂ ಇದೆ.  24 ಕ್ಯಾರೆಟ್​ ಚಿನ್ನದ ಬೆಲೆ 95,020 ರೂ ಇದ್ದು, ಇಂದು ಸುಮಾರು 490 ರೂ ಇಳಿಕೆ ಕಂಡಿದೆ.  22 ಕ್ಯಾರೆಟ್​ ನ ಆಭರಣ ಚಿನ್ನದ ಬೆಲೆ ಸುಮಾರು 450 ರೂ ಇಳಿಕೆ ಕಾಣುವ ಮೂಲಕ 87,100ಕ್ಕೆ ಮಾರಾಟವಾಗುತ್ತಿದೆ. ಹೈದರಾಬಾದ್‌ ನಲ್ಲಿ ಮಂಗಳವಾರ ಹತ್ತು ಗ್ರಾಂ ಚಿನ್ನದ ಬೆಲೆ ರೂ.96,060 ಇದ್ದರೆ, ಒಂದು ಕಿಲೋ ಬೆಳ್ಳಿಯ ಬೆಲೆ ರೂ. 97,583 ಆಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ $3,223 ರಷ್ಟಿತ್ತು. ಮಂಗಳವಾರ $11 ಕುಸಿತ ಕಂಡು $3,212 ಕ್ಕೆ ತಲುಪಿದೆ. ಬೆಳ್ಳಿಯ ಪ್ರಸ್ತುತ ಬೆಲೆ ಪ್ರತಿ ಔನ್ಸ್‌ಗೆ $32.21 ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ