ಯಾವುದೇ ವಿಷಯದಲ್ಲಿ ಸರಕಾರವನ್ನು ಟೀಕಿಸಬಹುದು: ಅಲಹಾಬಾದ್ ಹೈಕೋರ್ಟ್ - Mahanayaka

ಯಾವುದೇ ವಿಷಯದಲ್ಲಿ ಸರಕಾರವನ್ನು ಟೀಕಿಸಬಹುದು: ಅಲಹಾಬಾದ್ ಹೈಕೋರ್ಟ್

19/02/2025


Provided by

ಯಾವುದೇ ವಿಷಯದಲ್ಲಿ ಸರಕಾರವನ್ನು ಟೀಕಿಸಬಹುದು. ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ಒಂದು ಸಂಸ್ಥೆಯಾಗಿ ನ್ಯಾಯಾಂಗವೂ ಟೀಕೆಗೆ ಹೊರತಾಗಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.


Provided by

ಯತಿ ನರಸಿಂಹಾನಂದರ ಅವಹೇಳನಕಾರಿ ಭಾಷಣ ಕುರಿತು ಎಕ್ಸ್‌ನಲ್ಲಿಯ ಪೋಸ್ಟ್‌ಗಾಗಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಆಲ್ಟ್‌ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಅಲಹಾಬಾದ್ ಉಚ್ಚ ನ್ಯಾಯಾಲಯ ಈ ರೀತಿ ಹೇಳಿದೆ.

ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರಕಾರದ ಪರ ವಾದವನ್ನು ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮನೀಶ ಗೋಯಲ್ ಸರಕಾರವನ್ನು ಟೀಕಿಸುವುದು ಮತ್ತು ಸರಕಾರದ ನಿರ್ಧಾರಗಳನ್ನು ಟೀಕಿಸುವುದರ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಲು ಪ್ರಯತ್ನಿಸಿದಾಗ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಯೋಗೇಂದ್ರ ಕುಮಾರ ರ ಪೀಠವು ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.


Provided by

ಘಾಝಿಯಾಬಾದ್‌ನ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದರ ‘ಅವಹೇಳನಕರ’ ಭಾಷಣವನ್ನು ಒಳಗೊಂಡಿರುವ ತನ್ನ ಎಕ್ಸ್ ಪೋಸ್ಟ್‌ಗಳು ತನ್ನ ವೃತ್ತಿಪರ ಬದ್ಧತೆಯ ಭಾಗವಾಗಿದ್ದು,ಪೋಲಿಸ್ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುವುದು ಅವುಗಳ ಉದ್ದೇಶವಾಗಿತ್ತು ಎಂದು ಝುಬೈರ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ