ಗೋಹತ್ಯೆ ಕಾಯ್ದೆಯ ದುರ್ಬಳಕೆ | ಹೈಕೋರ್ಟ್ ಕಳವಳ - Mahanayaka

ಗೋಹತ್ಯೆ ಕಾಯ್ದೆಯ ದುರ್ಬಳಕೆ | ಹೈಕೋರ್ಟ್ ಕಳವಳ

27/10/2020

ಲಕ್ನೋ: ಉತ್ತರಪ್ರದೇಶದ ಗೋಹತ್ಯೆ ತಡೆ ಕಾಯ್ದೆಯ ದುರ್ಬಳಕೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಈ ಕಾಯ್ದೆಗಳನ್ನು ಅಮಾಯಕರ ಮೇಲೆ ಬಳಸಲಾಗುತ್ತಿದೆ. ಅಲ್ಲದೇ ಪೊಲೀಸರು ಈ ಪ್ರಕರಣಗಳಲ್ಲಿ ಸಲ್ಲಿಸಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನೂ ಕೋರ್ಟ್ ಪ್ರಶ್ನಿಸಿದೆ.




Provided by

 

 

ಗೋ ಹತ್ಯೆ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ್, ಯಾವುದೇ ಮಾಂಸ ಪತ್ತೆಯಾದಾಗ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿದೇ ಗೋಮಾಂಸ ಎಂದು ತೋರಿಸಲಾಗುತ್ತಿದೆ ಎಂದು ಅವರು ಹೇಳಿದರು.




Provided by

 

ಮಾಂಸವನ್ನು ವಿಶ್ಲೇಷಿಸದೇ ಆರೋಫ ಹೊರಿಸುತ್ತಿರುವುದರಿಂದಾಗಿ ನಿರಪರಾಧಿಗಳನ್ನು ಜೈಲಿನಲ್ಲಿಡುವುದು ಮುಂದುವರಿದಿದೆ. ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೋರಿಸಿರುವ ಕಡೆಗಳಲ್ಲೆಲ್ಲ ವಶಪಡಿಸಿಕೊಳ್ಳಲಾದ ಬಗ್ಗೆ ಸೂಕ್ತ ಮಾಹಿತಿಗಳನ್ನು ಸಿದ್ಧಪಡಿಸುತ್ತಿಲ್ಲ ಮತ್ತು ಹಾಗೆ ವಶಪಡಿಸಿಕೊಂಡ ಹಸುಗಳು ಎಲ್ಲಿಗೆ ಹೋಗುತ್ತವೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದು ಕೋರ್ಟ್ ಹೇಳಿದೆ.



ಇತ್ತೀಚಿನ ಸುದ್ದಿ