ಬಾಬಾ ಸಾಹೇಬರ ಸಂವಿಧಾನ ವಿಷಯದಲ್ಲಿ ಮನೆಮಂದಿಯೊಡಗೂಡಿ ಪ್ರಬಂಧ ರಚಿಸಿ, ಪ್ರಶಸ್ತಿ ಗೆಲ್ಲಿರಿ - Mahanayaka

ಬಾಬಾ ಸಾಹೇಬರ ಸಂವಿಧಾನ ವಿಷಯದಲ್ಲಿ ಮನೆಮಂದಿಯೊಡಗೂಡಿ ಪ್ರಬಂಧ ರಚಿಸಿ, ಪ್ರಶಸ್ತಿ ಗೆಲ್ಲಿರಿ

27/10/2020

ಕೊಡಗು: ನವಂಬರ್ 26 ಸಂವಿಧಾನ ಅಂಗೀಕಾರವಾದ ದಿನದ ಪ್ರಯುಕ್ತ  ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ,ಕೊಡಗು  ಇವರ ವತಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು. ಯಾವುದೇ ಕುಟುಂಬ ವರ್ಗ ಇದರಲ್ಲಿ  ಭಾಗವಹಿಸಲು ಅವಕಾಶವಿದೆ.. “ಒಂದು ಕುಟುಂಬ – ಒಂದು ಪ್ರಬಂಧ” ಪರಿಕಲ್ಪನೆ ಹೊಂದಿರುವ ಈ ಸ್ಪರ್ಧೆಯಲ್ಲಿ ಪ್ರಬಂಧ ರಚನೆಯಲ್ಲಿ ಕುಟುಂಬವರ ಸಹಕಾರ ತೆಗೆದುಕೊಳ್ಳಬಹುದು.

 

ಪ್ರಬಂಧದ ವಿಷಯ:  ” ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಪಾತ್ರ”

ಪ್ರಬಂಧವು ಸಾವಿರ ಪದಗಳನ್ನು ಮೀರಿರಬಾರದು. A4 ಸೈಜಿನ ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು. ಅಥವಾ ಕನ್ನಡದಲ್ಲಿ ಟೈಪ್ ಮಾಡಿ ಕೆಳಕಾಣಿಸಿದ ಈಮೇಲ್ ಗೆ ಕಳಿಸಬಹುದು.


ಪ್ರಬಂಧ ಕಳಿಸಲು ಕೊನೆಯ ದಿನಾಂಕ: 20-11-2020.

ಇಮೇಲ್ :  drbrambedkaryuvasenekodagu@gmail.com

Mobile No. 9483834971 / 9448600644



 

ವಿಳಾಸ:

ಡಾ.ಬಿ.ಆರ್. ಅಂಬೇಡ್ಕರ್ ಯುವ ಸೇನೆ, C/o ಸಹನ ಎಂಟರ್ಪ್ರೈಸಸ್, ಕಾರ್ಮಾಡು ಗ್ರಾಮ, ಅಮ್ಮತ್ತಿ ಅಂಚೆ -571211, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ

 

ಇತ್ತೀಚಿನ ಸುದ್ದಿ