ಸ್ವಯಂ ಸೇವಾ ಗೃಹರಕ್ಷಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Mahanayaka

ಸ್ವಯಂ ಸೇವಾ ಗೃಹರಕ್ಷಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

21/11/2020

ಕೋಲಾರ: ನಂ. 60-720 ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ 330 ಸ್ವಯಂ ಸೇವಾ ಗೃಹರಕ್ಷಕ ಮತ್ತು ಗೃಹರಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಪೊಲೀಸ್ ಇಲಾಖೆಯ ಅಂತರ್ಜಾಲ www.kolarpolice.com ನಲ್ಲಿ ಮತ್ತು ಜಿಲ್ಲಾ ಗೃಹರಕ್ಷಕದಳದ ಕಛೇರಿ, ಕೋಲಾರ ಟಮಕ ಕೈಗಾರಿಕಾ ಪ್ರಾಂಗಣದ ಹತ್ತಿರ ಇಲಿ ಕಛೇರಿಯ ವೇಳೆಯಲ್ಲಿ ಡಿಸೆಂಬರ್ 05 ರೊಳಗಾಗಿ ಪಡೆದು ಸಲ್ಲಿಸಬಹುದು.
ಕಂಪ್ಯೂಟರ್ ಹಾಗೂ ಡ್ರೈವಿಂಗ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಗೃಹರಕ್ಷಕದಳದ ಸಂಸ್ಥೆಯು ಒಂದು ಸ್ವಯಂ ಸೇವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯಲ್ಲಿ 3 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿದ್ದು, ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ / ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ಪ್ರತಿ ತಿಂಗಳು 4 ಕವಾಯತುಗಳನ್ನು ವಾರದಲ್ಲಿ ಒಂದು ದಿನದಂತೆ 3 ಗಂಟೆ ಅವಧಿ ನಡೆಸಲಾಗುವುದು.
ಆಸಕ್ತ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು.
19 ವರ್ಷ ಪೂರ್ಣಗೊಂಡಿರಬೇಕು ಹಾಗೂ 50 ವರ್ಷ ಮೀರಿರಬಾರದು. ವಿದ್ಯಾರ್ಹತೆ 10 ನೇ ತರಗತಿ (ಅಂಕಪಟ್ಟಿ / ಟಿ.ಸಿ.), ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರ (ಟಿ.ಸಿ.), ಬ್ಯಾಂಕ್ ಪಾಸ್ ಪುಸ್ತಕ (ಖಾತೆ ಚಾಲ್ತಿಯಲ್ಲಿರಬೇಕು), ಆಧಾರ್ ಕಾರ್ಡ್  ಚುನಾವಣಾ ಗುರುತಿನ ಚೀಟಿ (ವೋಟರ್ ಐ.ಡಿ.), ಪಾನ್ ಕಾರ್ಡ್, ಪಡಿತರ ಚೀಟಿ ಕಾರ್ಡ್ (ರೇಷನ್ ಕಾರ್ಡ್), ವಾಹನ ಚಾಲನ ಪರವಾನಗಿ (ಡಿ.ಎಲ್.), ವೈದ್ಯಕೀಯ ಪ್ರಮಾಣ ಪತ್ರ (ರಕ್ತದ ಗುಂಪು, ತೂಕ, ಎತ್ತರ ಒಳಗೊಂಡಂತೆ), ಮೊಬೈಲ್ ಸಂಖ್ಯೆ, ಈ-ಮೇಲ್ ಐ.ಡಿ., ಪಾಸ್ಪೋರ್ಟ್ ಅಳತೆಯ ಭಾವಚಿತ್ರ -2, ಅಭ್ಯರ್ಥಿಯ ಪೂರ್ಣ ವಿಳಾಸದೊಂದಿಗೆ ಪೋಸ್ಟ್ ಕಾರ್ಡ್ -1, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗೃಹರಕ್ಷಕದಳ ಸಮಾದೇಷ್ಟರಾದ ಕಿರಣ್ಕುಮಾರ್.ಕೆ.ಆರ್, ಸಹಾಯಕ ಬೋಧಕರಾದ ರವಿಕುಮಾರ್.ಬಿ, ದೂರವಾಣಿ ಸಂಖ್ಯೆ 7090440037, 9482233837, ಗೃಹರಕ್ಷಕದಳ ಕಛೇರಿ ದೂರವಾಣಿ ಸಂಖ್ಯೆ: 08152 – 243149 ಗೆ ಸಂಪರ್ಕಿಸಬಹುದಾಗಿದೆ ಎಂದು ಗೃಹರಕ್ಷಕ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ