ಕಾಂಗ್ರೆಸ್‌ ಒಂಥರಾ ಬಿಜೆಪಿಯ ಪತ್ನಿ ಇದ್ದ ಹಾಗೆ: ಅರವಿಂದ್ ಕೇಜ್ರಿವಾಲ್ - Mahanayaka
10:15 AM Wednesday 22 - October 2025

ಕಾಂಗ್ರೆಸ್‌ ಒಂಥರಾ ಬಿಜೆಪಿಯ ಪತ್ನಿ ಇದ್ದ ಹಾಗೆ: ಅರವಿಂದ್ ಕೇಜ್ರಿವಾಲ್

arvind kejriwal
05/11/2022

ನವದೆಹಲಿ: ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿಕೊಂಡು ಗುಜರಾತ್ ನಲ್ಲಿ ‘ಐ ಲವ್‌ ಯೂ- ಐ ಲವ್‌ ಯೂ’ ಆಟ ಆಡುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ವ್ಯಂಗ್ಯವಾಡಿದ್ದಾರೆ.

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ  ಅವರು, ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

‘ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪತಿ-ಪತ್ನಿ, ಸಹೋದರ-ಸಹೋದರಿ ಸಂಬಂಧ ಇದೆ. ನಿನ್ನೆ ಅಮಿತ್‌ ಶಾ ಅವರ ಸಂದರ್ಶನವೊಂದನ್ನು ನಾನು ನೋಡಿದೆ. ಅದರಲ್ಲಿ ಅವರು, ಗುಜರಾತ್‌ನಲ್ಲಿ ಸ್ಪರ್ಧೆ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತ್ರ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕೂಡ ಇದೇ ರೀತಿ ವರ್ತನೆ ಮಾಡುತ್ತಿದೆ. ಕಾಂಗ್ರೆಸ್‌ ಒಂಥರಾ ಬಿಜೆಪಿಯ ಪತ್ನಿ ಇದ್ದ ಹಾಗೆ. ಅವರು ಸಂಪೂರ್ಣವಾಗಿ ಬಿಜೆಪಿಯ ಜೇಬಿನಲ್ಲಿಯೇ ಇದ್ದಾರೆ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ