ನಾಪತ್ತೆಯಾದ ದಿನ ಚಂದ್ರಶೇಖರ್ ಗೆ ಒಂದೇ ನಂಬರ್ ನಿಂದ 10ಕ್ಕೂ ಹೆಚ್ಚು ಕರೆ!?: ಆ ನಂಬರ್ ಯಾರದ್ದು? - Mahanayaka
4:02 AM Saturday 14 - December 2024

ನಾಪತ್ತೆಯಾದ ದಿನ ಚಂದ್ರಶೇಖರ್ ಗೆ ಒಂದೇ ನಂಬರ್ ನಿಂದ 10ಕ್ಕೂ ಹೆಚ್ಚು ಕರೆ!?: ಆ ನಂಬರ್ ಯಾರದ್ದು?

chandrashekhar
05/11/2022

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಚಂದ್ರಶೇಖರ್ ನಾಪತ್ತೆಯಾದ ದಿನ ಒಂದೇ ಮೊಬೈಲ್ ನಂಬರ್ ನಿಂದ 10ಕ್ಕೂ ಹೆಚ್ಚು ಬಾರಿ ಕರೆ ಬಂದಿದೆ ಎಂದು ವರದಿಯಾಗಿದೆ.

ಚಂದ್ರಶೇಖರ್ ನದ್ದು ಅಪಘಾತದ ಸಾವಲ್ಲ, ಅದೊಂದು ಯೋಜಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ನಡುವೆ ಕೊಪ್ಪದಿಂದ ಸತತವಾಗಿ ಚಂದ್ರಶೇಖರ್ ಗೆ ಕರೆ ಬಂದಿರುವುದಾಗಿ ಹೇಳಲಾಗುತ್ತಿದೆ.

ಚಂದ್ರಶೇಖರ್ ನಾಪತ್ತೆಯಾದ ದಿನವಾದ  ಅ.30ರಂದು ಚಂದ್ರಶೇಖರ್ ಗೌರಿಗದ್ದೆಯಲ್ಲಿದ್ದ. ಈ ವೇಳೆ ಕೊಪ್ಪದಿಂದ ಆತನಿಗೆ ಫೋನ್ ಕಾಲ್ ಸತತವಾಗಿ ಬಂದಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ಕರೆ ಯಾರದ್ದು? ಈ ಕರೆಗೂ ಚಂದ್ರಶೇಖರ್ ಹತ್ಯೆಗೂ ಏನಾದರೂ ಸಂಬಂಧ ಇದೆಯಾ? ಎನ್ನುವ ಅನುಮಾನಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ