ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುವಿಗೆ ಅನಾರೋಗ್ಯ
ಕೊಟ್ಟಿಗೆಹಾರ: ಊರುಬಗೆಯಲ್ಲಿ ಕಾಡಾನೆ ಸೆರೆಗೆ ಆಗಮಿಸಿರುವ ದಸರಾದಲ್ಲಿ ಅಂಬಾರಿ ಹೊರುವ ಆನೆ ಅಭಿಮನ್ಯು ವಿಗೆ ಅನಾರೋಗ್ಯ ಪ್ರಾರಂಭವಾಗಿದೆ. ಜ್ವರ ಹಾಗೂ ಬೇದಿಯಿಂದಾಗಿ ಅಭಿಮನ್ಯು ಬಳಲುತ್ತಿದ್ದು, ಆಪರೇಷನ್ ಭೈರ ಕಾರ್ಯಾಚರಣೆ ಸಧ್ಯಕ್ಕೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
ಕಾರ್ಯಾಚರಣೆಗೆ ಬಂದಿರುವ ಇನ್ನೆರಡು ಆನೆಗಳಾದ ಅಜಯ್, ಗೋಪಾಲಸ್ವಾಮಿ ಎಂಬ ಆನೆಗಳಿಗೆ ಮದ ಬಂದಿರುವುದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಲು ಅಸಾಧ್ಯವಾಗಿದೆ.
ಅಭಿಮನ್ಯುವನ್ನು ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ:
ಕೊಟ್ಟಿಗೆಹಾರ: ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು,ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ ಆನೆಯಾದ ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲ. ಊರುಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯು ವನ್ನು ಕರೆ ತಂದಿದ್ದು ಅಭಿಮನ್ಯು ವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.
ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ:
ಕೊಟ್ಟಿಗೆಹಾರ:ಮೂಡಿಗೆರೆ ತಾಲ್ಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ತ ಸಂಘದ ಅಧ್ಯಕ್ಷ ವಿಕ್ರಂ ಒತ್ತಾಯಿಸಿದ್ದಾರೆ.
ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು. ಇದರಿಂದ ಕಾಡಾನೆಗಳ ಇರುವಿಕೆಯ ಬಗ್ಗೆ ನಿಖರ ಮಾಹಿತಿ ತಿಳಿಯುವುದರಿಂದ ಕೃಷಿಕರಿಗೆ ಕಾಡನಂಚಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ಕಾಡಾನೆಗಳ ಚಲನವಲನಗಳನ್ನು ಗಮನಿಸಲು ತಂಡವನ್ನು ರಚಿಸಬೇಕು. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka