ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾಂಗೆ ವಿರುದ್ಧ: ನಾಲಿಗೆ ಹರಿಯಬಿಟ್ಟ ಧರ್ಮಗುರು - Mahanayaka
12:22 AM Wednesday 3 - September 2025

ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾಂಗೆ ವಿರುದ್ಧ: ನಾಲಿಗೆ ಹರಿಯಬಿಟ್ಟ ಧರ್ಮಗುರು

shabbir ahmed siddiqui
06/12/2022


Provided by

ಅಹಮದಾಬಾದ್: ಚುನಾವಣೆಯಲ್ಲಿ ಮುಸ್ಲಿಮ್ ಮಹಿಳೆಯರು ಸ್ಪರ್ಧಿಸುವುದು ಇಸ್ಲಾಂಗೆ ವಿರುದ್ಧ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಮುಖ್ಯ ಧರ್ಮಗುರು ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ ಅವರು, ಮುಸ್ಲಿಮ್ ಮಹಿಳೆಯರಿಗೆ ಚುನಾವಣೆಗೆ ಟಿಕೆಟ್ ನೀಡುವವರು ಇಸ್ಲಾಮ್ ನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.  ನಿಮಗೆ ಪುರುಷರು ಕಾಣುವುದಿಲ್ಲವೇ? ಮಹಿಳೆಯರನ್ನು ಕರೆದು ಯಾಕೆ ಟಿಕೆಟ್ ಕೊಡುತ್ತೀರಿ ಎಂದು ಅವರು ಮಹಿಳಾ ವಿರೋಧಿ ಮಾತುಗಳನ್ನಾಡಿದ್ದಾರೆ.

ಮಹಿಳೆಯರನ್ನು ಶಾಸಕಿ, ಸಚಿವೆ, ಕೌನ್ಸಿಲರ್ ಗಳನ್ನಾಗಿ ಮಾಡಿದರೆ, ಇನ್ನೇನು ಆಗುತ್ತದೆ? ನಾವು ಹಿಜಾಬ್ ನ್ನು ರಕ್ಷಿಸುವುದು ಸಾಧ್ಯವಿಲ್ಲ ಮತ್ತು ಈ ವಿಷಯದಲ್ಲಿ ಧ್ವನಿಯೆತ್ತಲು ಸಾಧ್ಯವಿಲ್ಲ ಎಂದರು.

ಮಹಿಳೆಯರಿಗೆ ಟಿಕೆಟ್ ನೀಡಿದರೆ, ಅವರು ಚುನಾವಣೆಗೆ ಎಲ್ಲ ಧರ್ಮದವರ ಮನೆ ಬಾಗಿಲಿಗೆ ಹೋಗಿ ಮತ ಕೇಳಬೇಕಾಗುತ್ತದೆ. ಹೀಗಾಗಿ ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ