ಡ್ರಗ್ಸ್ ಕೇಸಲ್ಲಿ ಗುಜರಾತಲ್ಲಿ ವ್ಯಕ್ತಿಯ ಬಂಧನ: ಬಿಜೆಪಿ ನಾಯಕರೊಂದಿಗೆ ಆರೋಪಿಗೆ ಲಿಂಕ್ ಇದೆ ಎಂದು ಕಾಂಗ್ರೆಸ್ ಆರೋಪ - Mahanayaka
4:58 PM Sunday 14 - September 2025

ಡ್ರಗ್ಸ್ ಕೇಸಲ್ಲಿ ಗುಜರಾತಲ್ಲಿ ವ್ಯಕ್ತಿಯ ಬಂಧನ: ಬಿಜೆಪಿ ನಾಯಕರೊಂದಿಗೆ ಆರೋಪಿಗೆ ಲಿಂಕ್ ಇದೆ ಎಂದು ಕಾಂಗ್ರೆಸ್ ಆರೋಪ

23/07/2024

ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಮೂಲಕ ವ್ಯಕ್ತಿಯೊಬ್ಬನನ್ನು ಸೂರತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ ಸೇರಿದಂತೆ ಬಿಜೆಪಿಯ ಹಲವಾರು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.


Provided by

ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಡ್ರಗ್‌ ಪ್ಲೆಡರ್, ಆರೋಪಿ ವಿಕಾಸ್ ಅಹಿರ್ ಬಂಧನದ ನಂತರ ಗುಜರಾತ್ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ನಡೆಯುತ್ತಿದೆ. ಆತ ಬಿಜೆಪಿಯ ಮುಂಚೂಣಿ ಕಾರ್ಯಕರ್ತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಅಹಿರ್ ಬಂಧನದ ನಂತರ, ಕಾಂಗ್ರೆಸ್‌ನ ಹಲವು ನಾಯಕರು ಕೇಂದ್ರ ಸಚಿವ ಸಾಂಘವಿ, ಸಂಸದ ತೇಜಸ್ವಿ ಸೂರ್ಯ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಅಹಿರ್ ಇರುವ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ಡ್ರಗ್ ಪೆಡ್ಲರ್‌ನ ಬಂಧನವು ತಪ್ಪಿತಸ್ಥರ ವಿರುದ್ಧ ಅವರ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದೆ.

“ಖಚಿತ ಮಾಹಿತಿಯ ಮೇರೆಗೆ ಸೂರತ್ ಪೊಲೀಸರು ಸೋಮವಾರ, ಸಲಾಬತ್‌ಪುರ ಪ್ರದೇಶದಲ್ಲಿರುವ ಹೋಟೆಲ್‌ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 35.49 ಲಕ್ಷ ರೂಪಾಯಿ ಮೌಲ್ಯದ 910 ಗ್ರಾಂ ಮೆಫೆಡ್ರೋನ್ ಡ್ರಗ್‌ಅನ್ನು ವಶಪಡಿಸಿಕೊಂಡಿದ್ದಾರೆ” ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ