ಗುಜರಾತ್ ಪುರಸಭೆ ಚುನಾವಣೆ 2025: ಬಿಜೆಪಿಗೆ ಭರ್ಜರಿ ಜಯ; ಕಾಂಗ್ರೆಸ್ ಪಲ್ಟಿ - Mahanayaka

ಗುಜರಾತ್ ಪುರಸಭೆ ಚುನಾವಣೆ 2025: ಬಿಜೆಪಿಗೆ ಭರ್ಜರಿ ಜಯ; ಕಾಂಗ್ರೆಸ್ ಪಲ್ಟಿ

18/02/2025


Provided by

ಗುಜರಾತ್ ಮುನ್ಸಿಪಲ್ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಜಯ ಗಳಿಸಿದೆ. 1912 ವಾರ್ಡ್ ಗಳಲ್ಲಿ ಬಿಜೆಪಿ 1402, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಇತರರು 236 ವಾರ್ಡ್ ಗಳನ್ನು ಮತ್ತು ಕಾಂಗ್ರೆಸ್ 260 ವಾರ್ಡ್ ಗಳಲ್ಲಿ ಗೆಲ್ಲಲು ಯಶಸ್ವಿಯಾಗಿದೆ. ಒಟ್ಟು 68 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 57, ಕಾಂಗ್ರೆಸ್ 1, ಸಮಾಜವಾದಿ ಪಕ್ಷ 2 ಮತ್ತು ಇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ. ಐದು ಪುರಸಭೆಗಳ ಫಲಿತಾಂಶಗಳು ಬಾಕಿ ಉಳಿದಿವೆ. ಮೂರು ತಾಲ್ಲೂಕು ಪಂಚಾಯಿತಿಗಳ 78 ಸ್ಥಾನಗಳಲ್ಲಿ ಬಿಜೆಪಿ 55, ಕಾಂಗ್ರೆಸ್ 17 ಮತ್ತು ಇತರರು 6 ಸ್ಥಾನಗಳನ್ನು ಗೆದ್ದಿದ್ದಾರೆ.


Provided by

ಜುನಾಗಢ ಮುನ್ಸಿಪಲ್ ಕಾರ್ಪೊರೇಷನ್‌‌ನಲ್ಲಿ 60 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದೆ. ಮತದಾನ ಪ್ರಾರಂಭವಾಗುವ ಮೊದಲು ಬಿಜೆಪಿ ಎಂಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತು. ಅದರಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿದೆ.

ಅಹಮದಾಬಾದ್ ಜಿಲ್ಲೆಯ ಸನಂದ್ ಪುರಸಭೆಯಲ್ಲಿ ಬಿಜೆಪಿ ಗಮನಾರ್ಹ ಗೆಲುವು ದಾಖಲಿಸಿದೆ ಮತ್ತು ಬಾವ್ಲಾ ಪುರಸಭೆಯಲ್ಲಿ ಅರ್ಧದಷ್ಟು ತಲುಪಿದೆ. ಸನಂದ್ ನಲ್ಲಿ 28 ಸ್ಥಾನಗಳ ಪೈಕಿ 27 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮತದಾನಕ್ಕೂ ಮುನ್ನ ಒಂದು ಸ್ಥಾನವನ್ನು ಬಿಜೆಪಿ ಅವಿರೋಧವಾಗಿ ಗೆದ್ದಿತ್ತು. ಒಟ್ಟು 27 ಸ್ಥಾನಗಳ ಪೈಕಿ ಬಿಜೆಪಿ 24 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಾವ್ಲಾ ಪುರಸಭೆಯ 28 ಸ್ಥಾನಗಳಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 13 ಸ್ಥಾನಗಳನ್ನು ಗಳಿಸಿದೆ ಮತ್ತು ಒಂದು ಸ್ಥಾನವನ್ನು ಬಿಎಸ್ಪಿ ಅಭ್ಯರ್ಥಿ ಗೆದ್ದಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ