ಇಸ್ರೇಲ್ ನೊಂದಿಗೆ ಅಮೆರಿಕ‌ ನಿಲ್ಲುತ್ತದೆ: 'ಗಾಝಾದಲ್ಲಿನ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ನನ್ನ ಆದ್ಯತೆ' ಎಂದ ಅಮೆರಿಕ ಅಧ್ಯಕ್ಷ ಬೈಡನ್ - Mahanayaka

ಇಸ್ರೇಲ್ ನೊಂದಿಗೆ ಅಮೆರಿಕ‌ ನಿಲ್ಲುತ್ತದೆ: ‘ಗಾಝಾದಲ್ಲಿನ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ನನ್ನ ಆದ್ಯತೆ’ ಎಂದ ಅಮೆರಿಕ ಅಧ್ಯಕ್ಷ ಬೈಡನ್

14/10/2023


Provided by

ಗಾಝಾ ಪಟ್ಟಿಯಲ್ಲಿರುವ ಸಶಸ್ತ್ರ ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಭದ್ರತಾ ಬೇಲಿಯನ್ನು ಮುರಿದು ಭೂಮಾರ್ಗದ ಮೂಲಕ ಇಸ್ರೇಲ್ ಗೆ ನುಗ್ಗಿದ ನಂತರ ಭುಗಿಲೆದ್ದ ಯುದ್ಧದ ಪರಿಣಾಮವಾಗಿ ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವುದು ಆದ್ಯತೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

“ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ನನ್ನ ಆದ್ಯತೆಯಾಗಿದೆ. ಹಮಾಸ್ ನ ಭಯಾನಕ ದಾಳಿಗೆ ಬಹುಸಂಖ್ಯಾತ ಫೆಲೆಸ್ತೀನೀಯರಿಗೆ ಯಾವುದೇ ಸಂಬಂಧವಿಲ್ಲ. ಆದರೆ ಅವರು ಇದರ ಪರಿಣಾಮವಾಗಿ ಬಳಲುತ್ತಿದ್ದಾರೆ ಎಂಬ ಅಂಶವನ್ನು ನಾವು ಮರೆಯಬಾರದು” ಎಂದು ಬೈಡನ್ ಹೇಳಿದರು.

ಫಿಲಡೆಲ್ಫಿಯಾದ ಹಡಗು ಟರ್ಮಿನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ಮಧ್ಯಪ್ರಾಚ್ಯ ಪ್ರದೇಶದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಇಸ್ರೇಲ್, ಈಜಿಪ್ಟ್, ಜೋರ್ಡಾನ್ ಮತ್ತು ಇತರ ಅರಬ್ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಸರ್ಕಾರಗಳೊಂದಿಗೆ ನೇರವಾಗಿ ಸಂವಹನ ನಡೆಸಲಾಗುತ್ತಿದೆ ಎಂದರು.

ಹಮಾಸ್ ಭಯೋತ್ಪಾದಕರನ್ನು “ಶುದ್ಧ ದುಷ್ಟ” ಎಂದು ಕರೆದ ಅಮೆರಿಕ ಅಧ್ಯಕ್ಷರು, ಹಮಾಸ್ ಭಯೋತ್ಪಾದಕರು ಅಲ್-ಖೈದಾದ ಧೋರಣೆ ಹೊಂದಿದವರಾಗೇ ಮಾಡುತ್ತಿದ್ದಾರೆ ಎಂದು ಹೇಳಿದರು.

“ಈ ದಾಳಿಯ ಬಗ್ಗೆ ನಾವು ಹೆಚ್ಚು ತಿಳಿದುಕೊಂಡಷ್ಟೂ ಅದು ಹೆಚ್ಚು ಭಯಾನಕವಾಗುತ್ತದೆ. ಕನಿಷ್ಠ 27 ಅಮೆರಿಕನ್ನರು ಸೇರಿದಂತೆ 1,000 ಕ್ಕೂ ಹೆಚ್ಚು ಮುಗ್ಧ ಜೀವಗಳು ಬಲಿಯಾಗಿದೆ. ಈ ವ್ಯಕ್ತಿಗಳು ಅಲ್-ಖೈದಾದಂತೆ ಕಾಣುತ್ತಾರೆ. ಅವರು ಶುದ್ಧ ದುಷ್ಟರು. ನಾನು ಮೊದಲಿನಿಂದಲೂ ಹೇಳಿದಂತೆ, ಯುನೈಟೆಡ್ ಸ್ಟೇಟ್ಸ್ ಇಸ್ರೇಲ್ ನೊಂದಿಗೆ ನಿಲ್ಲುತ್ತದೆ” ಎಂದು ಬೈಡನ್ ಹೇಳಿದರು.

ಇತ್ತೀಚಿನ ಸುದ್ದಿ