ಹೊಸ ಷರತ್ತುಗಳಿಲ್ಲದೆ ಕದನ ವಿರಾಮ ಒಪ್ಪಂದಕ್ಕೆ ತಾನು ತಯಾರು ಎಂದ ಹಮಾಸ್
ಯಾವುದೇ ಹೊಸ ಷರತ್ತುಗಳಿಲ್ಲದೆ ಕದನ ವಿರಾಮ ಒಪ್ಪಂದಕ್ಕೆ ತಾನು ತಯಾರು ಎಂದು ಹಮಾಸ್ ಹೇಳಿದೆ. ಅಮೇರಿಕಾ ಮುಂದಿರಿಸಿರುವ ಕದನ ವಿರಾಮ ಕರಡನ್ನು ಹೊಸ ಷರತ್ತುಗಳಿಲ್ಲದೆ ತಾನು ಅಂಗೀಕರಿಸುವುದಾಗಿ ಹಮಾಸ್ ಹೇಳಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯು ಇದನ್ನು ವರದಿ ಮಾಡಿದೆ.
ಹಮಾಸ್ ನ ಪರವಾಗಿ ಕದನ ವಿರಾಮ ಚರ್ಚೆ ನಡೆಸ್ತಾ ಇರುವ ಕಲೀಲ್ ಹೈಯ್ಯಾ, ಖತರ್ ಪ್ರಧಾನಿ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ತಾನಿ ಮತ್ತು ಈಜಿಪ್ಟ್ ಇಂಟೆಲಿಜೆನ್ಸ್ ಮುಖ್ಯಸ್ಥ ಅಬ್ಬಾಸ್ ಕಮಲ್ ಮುಂತಾದವರು ಈ ಕುರಿದಂತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕದನ ವಿರಾಮ ಒಪ್ಪಂದ ಏರ್ಪಡಿಸುವುದಕ್ಕಾಗಿ ಹಲವು ಸುತ್ತಿನ ಚರ್ಚೆಗಳು ನಡೆದಿದೆಯಾದರೂ ಈವರೆಗೆ ಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಿ ಐ ಎ ಮುಖ್ಯಸ್ಥ ವಿಲಿಯಂ ಬೆಂಸ್ ಕೂಡ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಇನ್ನಷ್ಟು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದು ವರದಿಯಾಗಿದೆ. ಕಳೆದ ಜೂನ್ ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಕದನ ವಿರಾಮ ಕರಡು ಮುಂದಿರಿಸಿದ್ದರು. ಮೂರು ಹಂತಗಳಲ್ಲಿ ಕದನ ವಿರಾಮ ಏರ್ಪಡಿಸುವ ಬಗ್ಗೆ ಅವರು ಪ್ರಸ್ತಾಪಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth




























