ಹಾರ, ತುರಾಯಿ ಸನ್ಮಾನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ! | ಆದೇಶ ಪಾಲಿಸಬೇಕಾದವರು ಯಾರು? - Mahanayaka
12:23 AM Thursday 13 - February 2025

ಹಾರ, ತುರಾಯಿ ಸನ್ಮಾನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ! | ಆದೇಶ ಪಾಲಿಸಬೇಕಾದವರು ಯಾರು?

bommai sanmana
05/09/2021

ಬೆಂಗಳೂರು:  ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನಿಷೇಧಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದರು. ಆದರೆ ಇದೀಗ ತನ್ನ ಆದೇಶವನ್ನು ಸ್ವತಃ ಅವರೇ ಉಲ್ಲಂಘಿಸಿದ ಘಟನೆ ವಿಧಾನಸೌಧದ ಬ್ಯಾಂಕ್ಟೆಟ್ ಹಾಲ್ ನಲ್ಲಿ ನಡೆದಿದೆ.

 ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಆದೇಶಿಸಿದ್ದ ಬೊಮ್ಮಾಯಿ ಅವರು, ಭಾನುವಾರ ನಡೆದ ‘ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಗಳನ್ನು ಪಡೆದರು ಎಂದು ವರದಿಯಾಗಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಇದೇ ರೀತಿ ಸನ್ಮಾನಿಸಲಾಗಿದೆ. ಮುಖ್ಯಮಂತ್ರಿಗಳು, ಕೇಂದ್ರ ಸಚಿವರೇ ಈ ರೀತಿಯ ಸನ್ಮಾನ ಪಡೆಯುವುದಾದರೆ, ಈ ಆದೇಶಗಳೆಲ್ಲ ಯಾಕೆ ನೀಡಬೇಕಿತ್ತು? ತಮ್ಮ ಆದೇಶವನ್ನು ಮುಖ್ಯಮಂತ್ರಿಗಳೇ ಮುರಿದರೇ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ಅಪರಾಧಿಗೆ ಮರಣದಂಡನೆ

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

ಇತ್ತೀಚಿನ ಸುದ್ದಿ