ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸ್ತೀನಿ ಎಂದು ಮೂರು ನಾಮ ಹಾಕಿದ್ರು: ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಿದ ಬಿಜೆಪಿ ಕಾರ್ಯಕರ್ತನ ಬಂಧನ

ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಅವರ ವಿಶೇಷ ಕರ್ತವ್ಯದ ಅಧಿಕಾರಿಯಂತೆ ನಟಿಸಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ 27 ಲಕ್ಷ ರೂಪಾಯಿ ಹಣ ವಂಚಿಸಿದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ವಂಚಕನನ್ನು ಆಶಿಶ್ ಗುಲಾಟಿ ಎಂದು ಗುರುತಿಸಲಾಗಿದೆ. ಸ್ವತಃ ಅನಿಲ್ ವಿಜ್ ಅವರೇ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಇನ್ನೋರ್ವ ಆರೋಪಿ ಅಕ್ಷಯ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ವಿರುದ್ಧ ನಕಲಿ, ವಂಚನೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿಗಳು ಹಣ ವಸೂಲಿ ಮಾಡಿದ್ದರು ಎಂದು ಮನೀಶ್ ಗಾರ್ಗ್ ಎಂಬುವವರು ನೇರವಾಗಿ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಗಮನಕ್ಕೆ ಬಂದ ತಕ್ಷಣ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಅಲ್ಲದೇ ಆರೋಪಿಗಳು, ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ನಕಲಿ ನೇಮಕಾತಿಯನ್ನು ನೀಡಿದ್ದಾರೆ. ಮಾತ್ರವಲ್ಲ, ಈಗಾಗಲೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಸ್ಪೆಂಡ್ ಆಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ಬಳಿಯೂ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿ ಆಶಿಶ್ ಗುಲಾಟಿ ಜೊತೆಗೆ ವಿಜ್ ಅವರ ಕ್ಷೇತ್ರವೂ ಆಗಿರುವ ಅಂಬಾಲಾ ಕಂಟೋನ್ಮೆಂಟ್ ನ ಮಹೇಶ್ ನಗರ ಮಂಡಲದ ಉಪಾಧ್ಯಕ್ಷ ಆಶಿಶ್ ಗುಲಾಟಿ ಮತ್ತು ಅವರ ಸೋದರಳಿಯ ಲಕ್ಷ್ಯ ದತ್ತಾ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಲಾಗಿದೆ.
ಉದ್ಯೋಗಾಕಾಂಕ್ಷಿಗಳಲ್ಲಿ ಒಬ್ಬರನ್ನು ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕ ಮಾಡಲು ಆರೋಪಿಗಳು ದೂರುದಾರ ಮನೀಶ್ ಗರ್ಗ್ ಮೂಲಕ ಹಣವನ್ನು ತೆಗೆದುಕೊಂಡರು. ಅಲ್ಲಿ ಲಕ್ಷ್ಯ ನಕಲಿ ನೇಮಕಾತಿ ಪಟ್ಟಿ ಜೊತೆಗೆ ಮಧುಬನ್ ನ ಲ್ಲಿ ತರಬೇತಿಯ ವಿವರಗಳನ್ನು ನೀಡಿದರು ಎಂದು ಅಂಬಾಲಾ ವಲಯದ ಐಜಿಪಿ ಸಿಬಾಶ್ ಕಬಿರಾಜ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ, 406 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆಶಿಶ್ ನನ್ನು ಬಂಧಿಸಲಾಗಿದ್ದು, ಲಕ್ಷ್ಯ ಪರಾರಿಯಾಗಿದ್ದಾನೆ ಎಂದು ಎಸ್ಪಿ ಜಶನ್ ದೀಪ್ ಸಿಂಗ್ ರಾಂಧವ ತಿಳಿಸಿದ್ದಾರೆ.