ವಿದ್ಯಾರ್ಥಿ ಪ್ರತಿನಿಧಿ ಚುನಾವಣೆಯ ಬಳಿಕ ಗೆದ್ದವರು, ಸೋತವರ ನಡುವೆ ಗಲಾಟೆ: ಲಾಠಿ ಬೀಸಿದ ಪೊಲೀಸರು
ವಿದ್ಯಾರ್ಥಿ ಪ್ರತಿನಿಧಿ ಚುನಾವಣೆಯ ಫಲಿತಾಂಶದ ಬಳಿಕ ಗೆಲುವು ಸಾಧಿಸಿದ ತಂಡ ಹಾಗೂ ಸೋತ ತಂಡಗಳ ನಡುವೆ ಬೀದಿಲ್ಲೇ ಗಲಾಟೆ ನಡೆದ ಘಟನೆ ಹಾಸನದ ಪ್ರತಿಷ್ಠಿತ ತಾಂತ್ರಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ತಾಂತ್ರಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಂಜೆ ವಿದ್ಯಾರ್ಥಿ ಪ್ರತಿನಿಧಿ ಚುನಾವಣೆ ನಡೆದಿತ್ತು. ಗೆದ್ದ ಗುಂಪಿನ ವಿದ್ಯಾರ್ಥಿಗಳು ಪೊಲೀಸರ ಅನುಮತಿ ಪಡೆದು ನಗರದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಸೋತವರು ಹಾಗೂ ಗೆದ್ದವರ ನಡುವೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಇನ್ನೂ ವಿದ್ಯಾರ್ಥಿಗಳ ಗಲಾಟೆ ಕಂಡು ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka