ವಿಷಜಂತು ಕಡಿದು ತಂದೆ, ಮಗ ಇಬ್ಬರೂ ಸಾವು - Mahanayaka

ವಿಷಜಂತು ಕಡಿದು ತಂದೆ, ಮಗ ಇಬ್ಬರೂ ಸಾವು

mallikarjuna balappa
04/09/2021


Provided by

ಚಿಕ್ಕೋಡಿ: ವಿಷಜಂತು ಕಡಿದು ತಂದೆ ಹಾಗೂ ಮಗ ಮೃತಪಟ್ಟ ಘಟನೆ ಅಥಣಿ ಜಿಲ್ಲೆಯ ಬ್ಯಾಡಗಿ ಗ್ರಾಮದಲ್ಲಿ ನಡೆದಿದ್ದು, ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.


Provided by

ಆಗಸ್ಟ್ 29ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದಾಗ ಇಬ್ಬರಿಗೂ ಹಾವು ಕಚ್ಚಿದೆ. ಆದರೆ ಕತ್ತಲ ಸಮಯವಾಗಿದ್ದರಿಂದಾಗಿ, ತಮಗೆ ಏನು ಕಚ್ಚಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಅವರು ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗಿದೆ.

ಆದರೆ ಸ್ವಲ್ಪ ಸಮಯದ ಬಳಿಕ  ಇಬ್ಬರು ಕೂಡ ತೀವ್ರವಾಗಿ ಅಸ್ವಸ್ಥರಾಗಿದ್ದು, ಬಳಿಕ ಇಬ್ಬರನ್ನು ಕೂಡ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆಗಸ್ಟ್ 31ರಂದು 14 ವರ್ಷ ವಯಸ್ಸಿನ ಪುತ್ರ ಮಲ್ಲಿಕಾರ್ಜುನ್ ಮೃತಪಟ್ಟಿದ್ದು,  ಸೆಪ್ಟಂಬರ್ 2ರಂದು 40 ವರ್ಷ ವಯಸ್ಸಿನ ತಂದೆ ಬಾಳಪ್ಪ ಕುಂಬಾರ ಮೃತಪಟ್ಟಿದ್ದಾರೆ.


Provided by

ಇನ್ನಷ್ಟು ಸುದ್ದಿಗಳು…

ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ

ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ

ನವದೆಹಲಿಯ ಎಐಸಿಸಿ ಕಟ್ಟಡದಲ್ಲಿ ಐವನ್ ಡಿಸೋಜ ಕಚೇರಿ ಉದ್ಘಾಟನೆ | ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ

“ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ” | ಶಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದ ಸಚಿವ ಈಶ್ವರಪ್ಪ!

“ನಾವು ತಯಾರಾಗಿದ್ದೇವೆ ಎನ್.ಇ.ಪಿ ಬಗ್ಗೆ ಚರ್ಚೆಗೆ ನೀವು ತಯಾರಾಗಿದ್ದೀರಾ?”: ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನ

ಇತ್ತೀಚಿನ ಸುದ್ದಿ