ಕಾಬುಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ | ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿರುವ ಶಂಕೆ - Mahanayaka
3:23 PM Thursday 23 - January 2025

ಕಾಬುಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ | ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿರುವ ಶಂಕೆ

kabul airport
27/08/2021

ಕಾಬೂಲ್: ತಾಲಿಬಾನ್ ಆಡಳಿತಕ್ಕೊಳಗಾಗಿರುವ ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಾನಕ್ಕೆ ತೆರಳಬೇಕು ಎಂದು ವಿಮಾನ ನಿಲ್ದಾಣದ ಬಳಿಯಲ್ಲಿ ಕಾಯುತ್ತಿರುವ ಸಾವಿರಾರು ಜನರು ಗುರುವಾರ ಸಂಭವಿಸಿದ ಭೀಕರ ಸ್ಫೋಟಕ್ಕೆ ಬೆಚ್ಚಿ ಬಿದ್ದಿದ್ದಾರೆ.

ಈ ಸ್ಫೋಟದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳು ವೈರಲ್ ಆಗುತ್ತಿದ್ದು, ಛಿದ್ರಗೊಂಡಿರುವ ದೇಹಗಳು, ಅಂಗಾಂಗ ಕಳೆದುಕೊಂಡವರ ಚಿತ್ರಗಳು, ಮಾಂಸ ಖಂಡಗಳು ಮೊದಲಾದವುಗಳ ಫೋಟೋಗಳು ಭೀತಿ ಸೃಷ್ಟಿಸಿದೆ.

ನಮ್ಮ ದೇಶದ ಯಾವುದೇ ನಾಗರಿಕರು ಅಥವಾ ಸೇನಾ ಸಿಬ್ಬಂದಿಗೆ ಸ್ಫೋಟದಿಂದ ತೊಂದರೆಯಾಗಿಲ್ಲ ಎಂದು ಬ್ರಿಟನ್ ಗುರುವಾರ ತಿಳಿಸಿದೆ. ಆದರೆ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದ ಪರಿಣಾಮ ಉಂಟಾದ ಗೊಂದಲ ಸ್ಥಿತಿಗೆ ತಾನು ಹಾಗೂ ತಮ್ಮ ಸಿಬ್ಬಂದಿ ಸಾಕ್ಷಿಯಾಗಿದ್ದೇವೆ ಎಂದು ಅಫ್ಗಾನಿಸ್ತಾನದಲ್ಲಿ ಪ್ರಾಣಿ ಆಶ್ರಯ ಕೇಂದ್ರ ನಡೆಸುತ್ತಿರುವ ಬ್ರಿಟನ್‌ ನ ರಾಯಲ್ ಮರೀನ್‌ ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂಬ್ ಸ್ಫೋಟಕ್ಕೆ ಮುನ್ನ ಕೆಲವು ದೇಶಗಳು ಅಫ್ಗಾನಿಸ್ತಾನದಿಂದ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದ್ದವು. ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳು ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇನ್ನು ಮುಂದೆ ತೆರವು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದವು. ಆದರೆ ಕಾರ್ಯಾಚರಣೆ ಮುಂದುವರಿಸುವುದಾಗಿ ಅಮೆರಿಕ ತಿಳಿಸಿತ್ತು.

ಇನ್ನಷ್ಟು ಸುದ್ದಿಗಳು…

ಕಾನೂನು ಸುವ್ಯವಸ್ಥೆ ಹತೋಟಿಗೆ ಬರಲಿ ಎಂದು ಚಾಮುಂಡಿಯನ್ನು ಬೇಡಿದ್ದೇನೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ!

ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ

ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟ ಭಾರತದಲ್ಲಿ ಕುಷ್ಠ ರೋಗಿಗಳ ಸೇವೆ ಮಾಡಿದ ಮಹಾತಾಯಿ ಮದರ್ ತೆರೆಸಾ

ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ

ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ

ಇತ್ತೀಚಿನ ಸುದ್ದಿ