ಚಿರತೆ ಬೇಟೆಯಾಡಿ ಕಾಲು ಕತ್ತರಿಸಿ ಹೊತ್ತೊಯ್ಯುವಾಗ ಸಿಕ್ಕಿಬಿದ್ದರು - Mahanayaka
6:14 AM Wednesday 20 - August 2025

ಚಿರತೆ ಬೇಟೆಯಾಡಿ ಕಾಲು ಕತ್ತರಿಸಿ ಹೊತ್ತೊಯ್ಯುವಾಗ ಸಿಕ್ಕಿಬಿದ್ದರು

leopard
19/11/2023


Provided by

ಚಾಮರಾಜನಗರ: ನಾಡ‌ ಬದೂಕಿನಿಂದ ಚಿರತೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು , ಅರುಣ್ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ನಟ ರಾಜ್  ಎಂಬಾತ ತಲೆ ಮರೆಸಿಕೊಂಡಿದ್ದಾನೆ.

ಏನಿದು ಪ್ರಕರಣ:  ಅಕ್ರಮವಾಗಿ ನಾಡ ಬದೂಕು ಹೊಂದಿ ಪ್ರಾಣಿಗಳ‌‌ ಬೇಟೆಗೆ ಹೊರಟ್ಟಿದ್ದಾರೆ ಎಂಬ ಬಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳ ಅಧಿಕಾರಿಗಳು ಹಾಗು ಸಿಬ್ಬಂದಿ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ತಂಡಗಳನ್ನು ರಚನೆ ಮಾಡಿಕೊಂಡು ಮಧುವನಹಳ್ಳಿ, ಚಿಕ್ಕ ಲ್ಲೂರು, ಕೊತ್ತನೂರು ಮಾರ್ಗ ಕಡೆ ಗಸ್ತಿನಲ್ಲಿದ್ದಾಗ ಶನಿವಾರ  ಬೆಳಗಿನ ಜಾವ 5 ಗಂಟೆಯಲ್ಲಿ ದೊಡ್ಡಿಂದುವಾಡಿ ಚಾನಲ್ ರಸ್ತೆ ಯಲ್ಲಿ ಕಾಯುತ್ತಿದ್ದ ವೇಳೆ ಬೈಕ್ ವೊಂದರಲ್ಲಿ 6 ರಿಂದ 7 ಅಡಿ ಉದ್ದದ ವಸ್ತು ವೊಂದಕ್ಕೆ ಚೀಲಸುತ್ತಿಕೊಂಡು  ದೊಡ್ಡಿಂದುವಾಡಿ ಕಡೆಗೆ ಇಬ್ಬರು ತಡೆದ ಪೊಲೀಸರು ಪರಿಶೀಲಿಸಲಾಗಿ ಎರಡು ಅಕ್ರಮ ನಾಡ ಬಂದೂಕುಗಳು ಪತ್ತೆಯಾಗಿದೆ.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಆರೋ ಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಕಳೆದ 4 ದಿನಗಳ ಹಿಂದೆ ಕಾವೇರಿಪುರ ಸಮೀಪದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ನಟರಾಜು ಸೇರಿದಂತೆ ನಾವಿಬ್ಬರು ಚಿರತೆ ಯೊಂದನ್ನು ಭೇಟೆಯಾಡಿದ್ದು ಅದರ ಚರ್ಮವನ್ನು ಸುಲಿಯುವಾಗ ಯಾರೋ ಬಂದ ಹಾಗೇ ಆಗಿ ಚಿರತೆ ಕಾಲುಗಳನ್ನು ಮಾತ್ರ ಕತ್ತರಿಸಿಕೊಂಡು ಬಂದಿರುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಬಂಧಿತರಿಂದ 2 ನಾಡ ಬಂದೂಕು ಹಾಗು ಸ್ಪೋಟಕಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಈ ಸಂಬಂಧ‌ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತಲೆ‌ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ