ಗೃಹಪ್ರವೇಶದ ವಿಡಿಯೋ ಮಾಡುತ್ತಿದ್ದ ವೇಳೆ ಹೃದಯಾಘಾತ: ವಿಡಿಯೋಗ್ರಾಫರ್ ಸಾವು - Mahanayaka
8:43 PM Thursday 16 - October 2025

ಗೃಹಪ್ರವೇಶದ ವಿಡಿಯೋ ಮಾಡುತ್ತಿದ್ದ ವೇಳೆ ಹೃದಯಾಘಾತ: ವಿಡಿಯೋಗ್ರಾಫರ್ ಸಾವು

deepak shetty
14/02/2024

ಉಡುಪಿ: ಗೃಹ ಪ್ರವೇಶ ಸಮಾರಂಭದ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಆಘಾತಕಾರಿ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದಿದೆ.


Provided by

ಕಾರ್ಕಳ ತೆಳ್ಳಾರು ನಿವಾಸಿ ದೀಪಕ್ ಶೆಟ್ಟಿ(45) ಮೃತಪಟ್ಟವರಾಗಿದ್ದಾರೆ. ಹೊಸ ಮನೆಯೊಂದರ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ವಿಡಿಯೋಗ್ರಫಿ ಮಾಡುತ್ತಿದ್ದ ವೇಳೆ ಏಕಾಏಕಿ ದೀಪಕ್ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಆದರೆ ದುರಾದೃಷ್ಟವಶಾತ್ ಅವರು ಮಾರ್ಗ ಮಧ್ಯಯೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ