ಹೆಚ್ಚಿನ ಚಿಕಿತ್ಸೆಗಾಗಿ ರಜನಿಕಾಂತ್ ಅಮೆರಿಕಕ್ಕೆ | ಅಭಿಮಾನಿಗಳಲ್ಲಿ ಆತಂಕ
ಚೆನ್ನೈ: ಇತ್ತೀಚೆಗಷ್ಟೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರ ಆರೋಗ್ಯ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ.
ರಜನಿಕಾಂತ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಈ ಕಾರಣದಿಂದಲೇ ಅವರು, ರಾಜಕೀಯ ಪಕ್ಷ ಸ್ಥಾಪನೆಯಿಂದಲೂ ಹಿಂದಕ್ಕೆ ಸರಿದಿದ್ದರು. ತೀವ್ರ ರಕ್ತದೊತ್ತಡದಿಂದ ರಜನಿಕಾಂತ್ ಅವರು ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೂಡ ಎಷ್ಟು ಚಿಕಿತ್ಸೆ ನೀಡಿದರೂ ರಕ್ತದೊತ್ತಡ ಕಡಿಮೆಯಾಗಿರಲಿಲ್ಲ. ಹೀಗಾಗಿ ರಜನಿಕಾಂತ್ ಅಮೆರಿಕಕ್ಕೆ ತೆರಳಿ ಉನ್ನತ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ರಜನಿಕಾಂತ್ ಅನಾರೋಗ್ಯದಿಂದಾಗಿ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಡೆಯಬೇಕಿದ್ದ, ಜಿದ್ದಾಜಿದ್ದಿನ ಹೋರಾಟ, ರಾಜಕೀಯ ಇದೀಗ ಮಂಕಾಗಿದೆ ಎಂದೇ ಹೇಳಬಹುದು. ರಜನಿಕಾಂತ್ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದ ನಂತರ ತಮಿಳುನಾಡಿನಲ್ಲಿ ಅವರ ಅಭಿಮಾನಿಗಳ ಸಂಭ್ರಮವೇ ಬೇರೆಯದ್ದೇ ಆಗಿತ್ತು. ಆದರೆ ಇದೀಗ ರಜನಿಕಾಂತ್ ಅನಾರೋಗ್ಯ ಪರಿಸ್ಥಿತಿ ಒಮ್ಮೆ ಸುಧಾರಿಸಿದರೆ ಸಾಕು ಎನ್ನುವಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ.


























