ಇದು ಲವ್ ಜಿಹಾದ್ ಅಲ್ಲ, ಜಾತಿ ಭಯೋತ್ಪಾದನೆ | ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿ, ಆ ಮೇಲೆ ನಡೆದದ್ದೇನು ಗೊತ್ತಾ? - Mahanayaka

ಇದು ಲವ್ ಜಿಹಾದ್ ಅಲ್ಲ, ಜಾತಿ ಭಯೋತ್ಪಾದನೆ | ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿ, ಆ ಮೇಲೆ ನಡೆದದ್ದೇನು ಗೊತ್ತಾ?

02/01/2021

ಬೀದರ್: ಬೇರೆ ಜಾತಿಯ ಯುವಕ-ಯುವತಿ ಪ್ರೀತಿಸಿ ಮದುವೆಯಾಗಿದ್ದು, ಆದರೆ ಜಾತಿ ಪೀಡೆ ಇವರ ಸುತ್ತಸುತ್ತುತ್ತಲೇ  ಪ್ರಾಣ ಹಿಂಡುತ್ತಿದೆ. ಹಿಂದೂ ಧರ್ಮದಲ್ಲಿರುವ ಜಾತಿ ಎಂಬ ಅನಿಷ್ಠ ಈ ಜೋಡಿಯ ನೆಮ್ಮದಿಯನ್ನು ಕಸಿದುಕೊಂಡಿದೆ. ಇದರ ಜೊತೆಗೆ ಲವ್ ಜಿಹಾದ್ ಎಂದೆಲ್ಲ ಮಾತನಾಡುವ ಸಂಘಟನೆಗಳು ಹಿಂದೂ ಧರ್ಮದೊಳಗೆ  ನಡೆಯುತ್ತಿರುವ ಈ ದೌರ್ಜನ್ಯವನ್ನು ಪ್ರಶ್ನಿಸುತ್ತಲೂ ಇಲ್ಲ.

ಹುಮನಾಬಾದ್ ಪಟ್ಟಣದ ಮರಾಠಾ ಗಲ್ಲಿ ನಿವಾಸಿಗಳಾಗಿರುವ ಸುಧಾರಾಣಿ ಮತ್ತು ಸೂರ್ಯಕಾಂತ್ 2019ರ ನವೆಂಬರ್  13ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಇವರಿಬ್ಬರು ಬೇರೆ ಬೇರೆಜಾತಿಯವರು ಎನ್ನುವ ಕಾರಣಕ್ಕೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯುವಕನಿಗೆ ಈ ಬಗ್ಗೆ ಬೆದರಿಕೆ ಕರೆಗಳನ್ನು ಮಾಡಿ, ಪ್ರತಿನಿತ್ಯ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಯುವ ದಂಪತಿ ನೋವು ತೋಡಿಕೊಂಡಿದ್ದಾರೆ.

ಹುಡುಗನಿಗೆ ಮಾತ್ರವಲ್ಲದೇ ಅವರ ಕುಟುಂಬಸ್ಥರಿಗೂ ಬೆದರಿಕೆ ಹಾಕಲಾಗುತ್ತಿದೆ. ಇವರ ಬೆದರಿಕೆಗೆ ಹೆದರಿ ಮರಾಠಾ ಕಾಲನಿ ಬಿಟ್ಟು ವಿದ್ಯಾನಗರ ಕಾಲನಿಗೆ ಹೋಗಿ ವಾಸಿಸಿದರೂ ಜಾತಿ ಭಯೋತ್ಪಾದಕರ ಕಾಟ ತಪ್ಪಿಲ್ಲವಂತೆ.

ಮದುವೆಯಾಗಿ ಹೈದರಾಬಾದ್ ಗೆ ತೆರಳಿ. ಒಂದು ತಿಂಗಳ ಹಿಂದೆಯಷ್ಟೇ ಅಲ್ಲಿಂದ ವಾಪಸ್ ಬಂದಿದ್ದ ಜೋಡಿಗೆ ಯುವತಿಯ ಅಣ್ಣ, ಚಿಕ್ಕಪ್ಪ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ.ಯುವತಿಗೆ , “ನೀನು  ಗಂಡನನ್ನು ಬಿಟ್ಟು ಮನೆಗೆ ಬಾ” ಎಂದು ಧಮ್ಕಿ ಹಾಕಲಾಗುತ್ತಿದೆ. ಇದರಿಂದಾಗಿ ಪ್ರೇಮಿಗಳು ಇದೀಗ ಪೊಲೀಸರ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇಷ್ಟೊಂದು ಗಂಭೀರ ಪ್ರಕರಣವಾಗಿದ್ದರೂ ಪೊಲೀಸರು ಕೂಡ ಜಾತಿ ಪ್ರೇಮಿಗಳಂತೆ ವರ್ತಿಸುತ್ತಾ, ಕ್ರಮಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂಬ ಬಗ್ಗೆ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ